alex Certify ಮಾಜಿ ವಾಯುಸೇನಾ ಯೋಧರ ವೈಯಕ್ತಿಕ ಕಡತಗಳ ಸಂರಕ್ಷಣೆ 5 ವರ್ಷಕ್ಕೆ ಮಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ವಾಯುಸೇನಾ ಯೋಧರ ವೈಯಕ್ತಿಕ ಕಡತಗಳ ಸಂರಕ್ಷಣೆ 5 ವರ್ಷಕ್ಕೆ ಮಿತಿ

ಶಿವಮೊಗ್ಗ: ನ್ಯಾಯಾಲಯದ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಜಿ ವಾಯುಸೇನಾ ಯೋಧರ ವೈಯಕ್ತಿಕ ಕಡತಗಳನ್ನು ಹೊರತುಪಡಿಸಿ, ಬಾಕಿ ಮಾಜಿ ವಾಯುಸೇನಾ ಯೋಧರ ವೈಯಕ್ತಿಕ ಕಡತಗಳನ್ನು 25 ವರ್ಷಗಳ ಬದಲಾಗಿ ಕೇವಲ 5 ವರ್ಷಗಳು ಮಾತ್ರ ಸಂರಕ್ಷಿಸಲಾಗುವುದೆಂದು ವಾಯುಪಡೆ ದಾಖಲಾತಿ ಕಛೇರಿಯಿಂದ ಪ್ರಕಟಣೆ ಹೊರಡಿಸಿದೆ.

ಮಾಜಿ ವಾಯುಸೇನಾ ಯೋಧರಿಗೆ ತಮ್ಮ ವೈಯಕ್ತಿಕ ಕಡತಗಳ ಅವಶ್ಯಕತೆಯಿದ್ದರೆ ಜುಲೈ 10, 2025 ರೊಳಗೆ ವಾಯುಪಡೆ ದಾಖಲಾತಿ ಕಛೇರಿ ನವದೆಹಲಿ (ದೂರವಾಣಿ ಸಂಖ್ಯೆ: 011-25687194/5760 ಫ್ಯಾಕ್ಸ್ ಸಂಖ್ಯೆ: 011-25696552) ಇವರನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...