ಬೇಕಾಗುವ ಸಾಮಗ್ರಿಗಳು : ಬಾಳೆಹಣ್ಣು : 4, ಹಾಲು – 1 ಕಪ್. ಸಕ್ಕರೆ – 2 ದೊಡ್ಡ ಚಮಚ, ಗೋಡಂಬಿ – 1/4 ಕಪ್, ಐಸ್ಕ್ಯೂಬ್ – (ಬೇಕು ಎನಿಸಿದರೆ ಮಾತ್ರ)
ಮಾಡುವ ವಿಧಾನ : ಗೋಡಂಬಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಗೋಡಂಬಿ ಚೆನ್ನಾಗಿ ಪುಡಿಯಾದ ಬಳಿಕ ಇದೇ ಮಿಕ್ಸಿ ಜಾರಿಗೆ ಬಾಳೆಹಣ್ಣನ್ನು ಕಿವುಚಿ ಹಾಕಿ. ಜೊತೆಗೆ ಸಕ್ಕರೆಯನ್ನೂ ಸೇರಿಸಿ. ಇನ್ನೊಂದು ರೌಂಡ್ ಮಿಕ್ಸಿ ತಿರುಗಿಸಿ. ಈಗ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಇದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕಲಿಸಿರಿ. ಬೇಕಾದಲ್ಲಿ 1 ಐಸ್ ಕ್ಯೂಬ್ ಹಾಕಿ ಲೋಟದಲ್ಲಿ ಸರ್ವ್ ಮಾಡಿ. ಐಸ್ ಕ್ಯೂಬ್ ಬಳಕೆ ಮಾಡಲು ಇಷ್ಟವಿಲ್ಲದೇ ಇದ್ದಲ್ಲಿ. ಕಾಯಿಸಿದ ಹಾಲು ತಣ್ಣಗಾದ ಬಳಿಕ ಅದನ್ನು ಫ್ರಿಡ್ಜ್ನಲ್ಲಿಟ್ಟು ಬಳಕೆ ಮಾಡಿದರೂ ಮಿಲ್ಕ್ ಶೇಕ್ ಸಖತ್ ಕೂಲ್ ಆಗಿ ಇರಲಿದೆ.