ಕೆಲವೇ ನಿಮಿಷಗಳಲ್ಲಿ ತಯಾರಾಗುವ ತಿಂಡಿ ಎಂದರೆ ಅದು ಪುಳಿಯೋಗರೆ. ಬೆಳಗ್ಗೆ ಯಾವುದೇ ಟೆನ್ಶನ್ ಇಲ್ಲದೆ ಈ ತಿಂಡಿಯನ್ನು ಸುಲಭವಾಗಿ ಮಾಡಬಹುದು.
ಹಾಗೇ ಅವಲಕ್ಕಿಯಿಂದ ತಯಾರಾಗುವ ಪುಳಿಯೋಗರೆ ಹೇಗೆ ಮಾಡಬೇಕು ಅಂತ ತಿಳಿಬೇಕಾ. ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಮಿಡಿಯಂ ಅವಲಕ್ಕಿ – 1/2 ಕೆಜಿ
ಪುಳಿಯೋಗರೆ ಪುಡಿ ಅಥವಾ ಗೊಜ್ಜು
ಎಣ್ಣೆ ಅಗತ್ಯಕ್ಕೆ ತಕ್ಕಷ್ಟು
ಕರಿಬೇವು 1 ಕಡ್ಡಿ
ಶೇಂಗಾ ಬೀಜ
ಸ್ವಲ್ಪ ಅರಿಶಿಣ
ಮಾಡುವ ವಿಧಾನ
ಅವಲಕ್ಕಿಯನ್ನು ತೊಳೆದು ಸ್ವಲ್ಪ ಹೊತ್ತು ನೆನೆಯಲು ಬಿಡಿ. ಬಾಣೆಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸ್ವಲ್ಪ ಸಾಸಿವೆ, ಶೇಂಗಾಬೀಜ, ಕರಿಬೇವಿನಸೊಪ್ಪು ಹಾಗೂ ಅರಿಶಿಣ ಹಾಕಿ ಬಾಡಿಸಿ. ಇದಕ್ಕೆ ಪುಳಿಯೋಗರೆ ಪುಡಿ ಅಥವಾ ಗೊಜ್ಜನ್ನು ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಬಾಡಿಸಿ. ಬಳಿಕ ಇದಕ್ಕೆ ಮೊದಲೆ ನೆನೆಸಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಬಾಡಿಸಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಅದಕ್ಕೆ ಬೇಕಾದರೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಬಹುದು.