ಮಕ್ಕಳಿಗೆ ಬೇಕರಿಯಿಂದ ತಂದ ತಿನಿಸುಗಳು ಇಷ್ಟವಾಗುತ್ತವೆ. ಅವುಗಳನ್ನು ಮನೆಯಲ್ಲೇ ತಯಾರಿಸಿದರೆ ಹೆಚ್ಚು ಆರೋಗ್ಯಕರವಾಗಿರುತ್ತದೆ. ಬಿಸ್ಕೆಟ್ ಕೂಡ ಮನೆಯಲ್ಲಿ ತಯಾರಿಸಿ ಸವಿಯಬಹುದು. ಇಲ್ಲಿದೆ ಹೋಮ್ ಮೇಡ್ ಬಿಸ್ಕೆಟ್ ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಮೈದಾ ಹಿಟ್ಟು- 2 ಕಪ್
ಬೇಕಿಂಗ್ ಪೌಡರ್ – 1 ಸ್ಪೂನ್
ಉಪ್ಪು- ಅರ್ಧ ಟೀ ಸ್ಪೂನ್
ಹಾಲು – 3/4 ಕಪ್
ಮಾಡುವ ವಿಧಾನ
ಓವನ್ ಅನ್ನು 450 ಡಿಗ್ರಿ ಫ್ಯಾರನ್‌ಹೀಟ್‌ವರೆಗೆ ಪ್ರಿಹೀಟ್ ಮಾಡಿಕೊಳ್ಳಿ. ಮಿಕ್ಸಿಂಗ್ ಬೌಲ್ ಒಂದನ್ನು ತೆಗೆದುಕೊಂಡು ಅದರಲ್ಲಿ ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಸೇರಿಸಿ ಫೋರ್ಕ್ ಅಥವಾ ಬ್ಲೆಂಡರ್ ಬಳಸಿ ಹಿಟ್ಟನ್ನು ಚೆನ್ನಾಗಿ ನಾದಿ. ಫೋರ್ಕ್ ಮೂಲಕ ಕಲೆಸುವಾಗ ಹಾಲನ್ನು ಈ ಮಿಶ್ರಣಕ್ಕೆ ಹಾಕಿ. ಹಿಟ್ಟು ಮೆತ್ತಗಾಗಿ, ಪಾತ್ರೆಯಿಂದ ಬಿಟ್ಟು ಕೈಗೆ ಬರುವವರೆಗೆ ಹಾಲು ಹಾಕಿ ಮಿಶ್ರಮಾಡಿ.
ಹಿಟ್ಟು ಅಂಟಾಗದಂತೆ ಸ್ವಲ್ಪ ಮೈದಾ ಹಿಟ್ಟನ್ನು ಮೇಲಿಂದ ಹಾಕಬಹುದು. ಹಿಟ್ಟನ್ನು ಅರ್ಧ ಇಂಚಿನಷ್ಟು ದಪ್ಪದ ಶೀಟ್‌ನಂತೆ ಹರಡಿ. ಇದನ್ನು ಕುಕ್ಕಿ ಕಟರ್‌ನಿಂದ ಕತ್ತರಿಸಿ. ಬಳಸದ ಹೆಚ್ಚುವರಿ ಹಿಟ್ಟನ್ನು ತೆಗೆದು ಮತ್ತೆ ಶೀಟ್‌ನಂತೆ ಹರಡಿ ಕತ್ತರಿಸಿ. ಈ ಕತ್ತರಿಸಿದ ಬಿಸ್ಕೆಟ್‌ಗಳನ್ನು ಬೇಕಿಂಗ್ ಶೀಟ್ ಮೇಲಿರಿಸಿ ಗೋಲ್ಡನ್ ಬ್ರೌನ್‌ಗೆ ಪ್ರಿಹೀಟ್ ಮಾಡಲಾದ ಓವನ್‌ನಲ್ಲಿಟ್ಟು 10 ನಿಮಿಷ ಕಾಲ ಬೇಯಿಸಿ. ಇಷ್ಟಾದ ಮೇಲೆ ಬಿಸ್ಕೆಟ್ ರೆಡಿಯಾಗುತ್ತದೆ. ಮಕ್ಕಳಿಗೂ ಈ ಬಿಸ್ಕೆಟ್ ಇಷ್ಟವಾಗುತ್ತದೆ.