ಅವಧಿಗೂ ಮುನ್ನ ಜನಿಸಿದ ಪುಟ್ಟ ಕಂದಮ್ಮ ತನ್ನ ಕೂದಲಿನ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ.
ಉತ್ತರ ಐರ್ಲೆಂಡ್ನ ಜಾಕ್ಸನ್ ಜೇಮ್ಸ್ ಐರ್ಸ್ ಎಂಬ ಹೆಸರಿನ ಮಗು 8 ವಾರಕ್ಕೂ ಮುನ್ನವೇ ಜನಿಸಿತ್ತು. ಆದರೆ ವಿಚಿತ್ರ ಅಂದರೆ ಈ ಮಗು ತಲೆಗೂದಲು ಮಾತ್ರ ಸಖತ್ ಸೊಂಪಾಗಿ ಬೆಳೆದಿದ್ದು ಕುಟುಂಬಸ್ಥರ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಜಾಕ್ಸನ್ ಜೇಮ್ಸ್ಗೆ ಈಗ ಮೂರು ತಿಂಗಳು. ಈಗಲೂ ಕೂಡ ಆತನ ಕೂದಲು ಸೊಂಪಾಗಿಯೇ ಇದೆ. ತನ್ನ ಮಗನ ಕೂದಲು ಹೀಗೆ ಬೆಳೆದಿರೋದನ್ನ ನೋಡೋದೇ ತಾಯಿಗೆ ಪರಮಾನಂದವಂತೆ.
ಜಾಕ್ಸನ್ ಜನಿಸಿದ ತಕ್ಷಣ ಅವನಲ್ಲಿ ಅಪರೂಪದ ಸಮಸ್ಯೆಯೊಂದು ಕಾಣಿಸಿಕೊಂಡಿತ್ತು. ಹೈಪರ್ನ್ಸುಲಿಸಂ ಎಂಬ ಸ್ಥಿತಿ ಇದಾಗಿದ್ದು ಈತನ ದೇಹದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿ ಇರಬೇಕು ಅಂದರೆ ನಿಯಮಿತವಾಗಿ ಆಹಾರ ಹಾಗೂ ಮೆಡಿಕೇಷನ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.
ಇದೇ ಸಮಸ್ಯೆಯ ಕಾರಣದಿಂದಾಗಿಯೇ ಸಾಮಾನ್ಯ ಮಗುವಿಗೆ ಇರಬೇಕಾದ ಕೂದಲಿನಿಂದ ದುಪ್ಪಟ್ಟು ಕೂದಲು ಈತನ ತಲೆಯಲ್ಲಿ ಬೆಳೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದೊಂದು ವಿಚಿತ್ರ ಸಮಸ್ಯೆಯಾಗಿದ್ದು 30 ಸಾವಿರ ಮಕ್ಕಳಲ್ಲಿ ಪ್ರತಿ ಒಂದು ಮಗುವಿಗೆ ಕಾಣಿಸಿಕೊಳ್ಳುತ್ತೆ. ಈ ಸಮಸ್ಯೆ ಹೊಂದಿರುವ ಮಗುವಿನ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿ ಆಗುತ್ತಿರುತ್ತದೆ.
ಹೀಗಾಗಿ ಇದಕ್ಕೆ ಆ ಮಗು ಚಿಕಿತ್ಸೆ ಪಡೆಯುತ್ತಲೇ ಇರಬೇಕು. ಈ ಸಮಸ್ಯೆಯ ಪ್ರಮುಖ ಸೈಡ್ ಎಫೆಕ್ಟ್ ಅಂದರೆ ಅತ್ಯಂತ ವೇಗದಲ್ಲಿ ಕೂದಲು ಬೆಳೆಯುವುದು. ಕೇವಲ ತಲೆಗೂದಲು ಮಾತ್ರವಲ್ಲದೇ ಈತನ ಕೈ ಹಾಗೂ ಕಾಲಿನಲ್ಲಿಯೂ ಕೂದಲಿನ ಬೆಳವಣಿಗೆ ಹೆಚ್ಚಾಗಿರುತ್ತೆ ಎಂದು ವೈದ್ಯರು ಹೇಳಿದ್ದಾರೆ.