
ಇತಿಹಾಸ ಪೂರ್ವದ ಕಾಲಕ್ಕೆ ಸೇರಿದ ಸುಣ್ಣದಕಲ್ಲಿನ ಗುಹೆಯೊಂದು ತೆಲಂಗಾಣದಲ್ಲಿ ಪತ್ತೆಯಾಗಿದೆ. ಪ್ರಿಹಾಹ್ ಎಂಬ ಸ್ವತಂತ್ರ ಸಂಸ್ಥೆಯೊಂದು ಇಲ್ಲಿನ ಆಸಿಫಾಬಾದ್‌ನಲ್ಲಿ 11,000 ವರ್ಷಗಳಷ್ಟು ಹಳೆಯ ಈ ಗುಹೆಯನ್ನು ಪತ್ತೆ ಮಾಡಿದೆ.
ಸಾವಿರಾರು ವರ್ಷಗಳಿಂದ ಆಕಾರ ಪಡೆಯುತ್ತಾ ಬಂದಿರುವ ಈ ಗುಹೆಗಳಲ್ಲಿ ಅಮೂಲ್ಯವಾದ ಭೌಗೋಳಿಕ ಸಂಪತ್ತು ಅಡಗಿದೆ ಎಂದು ಪ್ರಾಚ್ಯವಸ್ತು ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಸಿಫಾಬಾದ್ ಜಿಲ್ಲೆಯ ತಿರ್ಯಾನಿ ಮಂಡಲದಲ್ಲಿ ಬರುವ ಈ ಗುಹೆಯನ್ನು ಸ್ಥಳೀಯವಾಗಿ ಅರ್ಜುನ್ ಲೊಡ್ಡಿ ಗುಹೆ ಎಂದು ಕರೆಯಲಾಗುತ್ತದೆ ಎಂದು ಈ ಶೋಧದ ನೇತೃತ್ವ ವಹಿಸಿದ್ದ ಎಂ ಎ ಶ್ರೀನಿವಾಸನ್ ಹೇಳುತ್ತಾರೆ.
ಇಲ್ಲಿನ ಕಾವಲ್ ಹುಲಿ ಸಂರಕ್ಷಿತ ಧಾಮದಲ್ಲಿ ಇರುವ ಈ ಗುಹೆಯನ್ನು ತಲುಪಲು ಮಣ್ಣಿನ ರಸ್ತೆಗಳನ್ನು ದಾಟಿ ಹೋಗಬೇಕು. ಗೊಂಡ್ ಹಾಗೂ ಪರ್ಧನ್ ಬುಡಕಟ್ಟು ಜನಾಂಗದ ಮಂದಿ ತಮ್ಮ ಹಬ್ಬಗಳ ಸಂದರ್ಭದಲ್ಲಿ ಗುಹೆಯನ್ನು ಪೂಜಿಸುತ್ತಾರೆ.