ಶ್ರೀಲಂಕಾ ಮೂಲದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ʼಮನಿಕೆ ಮಗೆ ಹಿತೆʼಯನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದಾಗ, ಹಾಡು ಇಂಟರ್ನೆಟ್ನಲ್ಲಿ ಇಷ್ಟೊಂದು ಸಂಚಲನ ಸೃಷ್ಟಿಸುತ್ತದೆ ಅಂತಾ ಬಹುಶಃ ಅವರೇ ತಿಳಿದಿರಲಿಲ್ಲ.
ಗಾಯಕಿ ತನ್ನ ಸಿಂಹಳೀಯ ಹಾಡಿನ ಆವೃತ್ತಿಯನ್ನು ಅಪ್ಲೋಡ್ ಮಾಡಿ ಹಲವು ತಿಂಗಳುಗಳೇ ಕಳೆದ್ರೂ ಕೂಡ, ಇನ್ನೂ ಹಾಡಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಇನ್ಸ್ಟಾಗ್ರಾಮ್ ಪ್ರಭಾವಿಗಳು, ಸಾಮಾನ್ಯರವರೆಗೆ ಎಲ್ಲರೂ ಈ ವೈರಲ್ ಹಾಡಿನ ಮೋಡಿಗೆ ಒಳಗಾಗಿದ್ದಾರೆ. ಇದೀಗ ಗರ್ಭಿಣಿಯೊಬ್ಬರು ಮನಿಕೆ ಮಗೆ ಹಿತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ರಾತನ್ ಲಂಬಿಯಾನ್’ ಗೆ ಲಿಪ್ ಸಿಂಕ್ ಮಾಡಿದ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್
ವಿಡಿಯೋದಲ್ಲಿರುವ ಮಹಿಳೆಯನ್ನು ಯೂಟ್ಯೂಬರ್ ರೇಣು ಎಂದು ಗುರುತಿಸಲಾಗಿದೆ. ರೇಣು ಅವರು ತನ್ನ ಬೇಬಿ ಬಂಪ್ ನೃತ್ಯ ಪ್ರದರ್ಶಿಸಿದ್ದಾರೆ. ಈ ಹಾಡಿಗೆ ಗರ್ಭಿಣಿ ರೇಣು ತನ್ನ ಸ್ನೇಹಿತೆ ಕಾವ್ಯಾ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಗರ್ಭಿಣಿಯಾಗಿರುವುದರಿಂದ ಡ್ಯಾನ್ಸ್ ಮಾಡಲು ತುಸು ಕಷ್ಟವಾದ್ರೂ ಕೂಡ, ಅವರು ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದ್ದಾರೆ.
ಬೇಬಿ ಬಂಪ್ ಕೆಲವೊಮ್ಮೆ ನಿಮ್ಮನ್ನು ನಾಚಿಕೆ ಮತ್ತು ಜಾಗೃತರನ್ನಾಗಿ ಮಾಡಬಹುದು. ಆದರೆ, ಇದರರ್ಥ ನೀವು ಹೆಚ್ಚು ಇಷ್ಟಪಡುವ ವಿಷಯಗಳನ್ನು ಕಳೆದುಕೊಳ್ಳುತ್ತೀರಿ ಎಂದಲ್ಲ. ಮತ್ತೆ ತಾನು ನೃತ್ಯಕ್ಕೆ ಹಿಂತಿರುಗಿದ್ದು, ಈ ಹಾಡು ಇನ್ನೂ ಟ್ರೆಂಡಿಂಗ್ ನಲ್ಲಿದೆ ಎಂದು ಭಾವಿಸುತ್ತೇವೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಗರ್ಭಿಣಿ ಹಾಗೂ ಆಕೆಯ ಸ್ನೇಹಿತೆ ಮಾಡಿರುವ ನೃತ್ಯವನ್ನು ನೆಟ್ಟಿಗರು ಪ್ರೀತಿಸಿದ್ದಾರೆ. ಕಾಮೆಂಟ್ಗಳ ವಿಭಾಗವು ಪ್ರೀತಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿದೆ.
https://youtu.be/EI3YoXTXfKE