ಗರ್ಭಿಣಿಯರು ಸಾಕಷ್ಟು ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತಾರೆ. ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದರೆ ಒಳ್ಳೆಯದು. ಕಲ್ಲಂಗಡಿ ಹಣ್ಣನ್ನು ಗರ್ಣಿಣಿಯರು ತಿನ್ನಬಹುದೇ ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 92% ರಷ್ಟು ನೀರಿನಾಂಶವಿದೆ. ಇದು ದೇಹವನ್ನು ಹೈಡ್ರೆಟೆಡ್ ಆಗಿ ಇಡುವುದಕ್ಕೆ ಸಹಾಯ ಮಾಡುತ್ತದೆ. ಹಾಗೇ ನಾರಿನಾಂಶ, ವಿಟಮಿನ್ಸ್, ಮಿನರಲ್ಸ್ ಜಾಸ್ತಿ ಇದೆ ಇದರಲ್ಲಿ. ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತದೆ.
ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಹುಟ್ಟಲಿರುವ ಮಗುವಿನ ಆರೋಗ್ಯಕ್ಕೂ ಕೂಡ ಇದು ತುಂಬಾ ಒಳ್ಳೆಯದು. ತೂಕ ಇಳಿಕೆಗೆ ಕೂಡ ಈ ಹಣ್ಣು ಸಹಾಯಕಾರಿಯಾಗಿದೆ. ಹಾಗೇ ಇದನ್ನು ತಿನ್ನುವುದರಿಂದ ಕಾಲು ಊದಿಕೊಳ್ಳುವಿಕೆ ಕೂಡ ಕಡಿಮೆಯಾಗುತ್ತದೆ.
ಇನ್ನು ಗರ್ಭಿಣಿಯರಿಗೆ ಜೀರ್ಣಕ್ರಿಯೆಯ ಸಮಸ್ಯೆ ಇರುತ್ತದೆ. ಇನ್ನು ಕೆಲವರಿಗೆ ಅಸಿಡಿಟಿ ಸಮಸ್ಯೆ ಇರುತ್ತದೆ. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಇದು ಕಡಿಮೆಯಾಗುತ್ತದೆ.
ಇದರಲ್ಲಿ ಕ್ಯಾಲ್ಸಿಯಂ, ಪೋಟ್ಯಾಷಿಯಂ ಹೇರಳವಾಗಿದೆ. ಹುಟ್ಟಲಿರುವ ಮಗುವಿನ ದೇಹದ ಬೆಳವಣಿಗೆಗೆ ಇದು ಸಹಾಯಕಾರಿಯಾಗಿದೆ.