alex Certify ಗರ್ಭಿಣಿಯರು ತಪ್ಪದೇ ಸೇವಿಸಿ ಈ ಜೀವಸತ್ವ ಹೊಂದಿರುವ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ತಪ್ಪದೇ ಸೇವಿಸಿ ಈ ಜೀವಸತ್ವ ಹೊಂದಿರುವ ಆಹಾರ

ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಗಳು ಹೆಚ್ಚು ಅವಶ್ಯಕವಾಗಿವೆ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಮಗುವಿನ ಸೂಕ್ತ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಗರ್ಭಿಣಿಯರು ಉತ್ತಮ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಅಲ್ಲದೇ ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲ ಗರ್ಭಿಣಿಯರು ತಪ್ಪದೇ ಸೇವಿಸಿ. ಯಾಕೆಂದರೆ ಈ ಜೀವಸತ್ವ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದ ತಾಯಿ ಮಗುವನ್ನು ಅನೇಕ ಸಮಸ್ಯೆಗಳಿಂದ ಕಾಪಾಡಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲವನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.

ಗರ್ಭಧಾರಣೆಯ ಆರಂಭದಲ್ಲಿ ಬಿ ಪೋಷಣೆಯಾದ ಫೋಲಿಕ್ ಆಮ್ಲವನ್ನು ಸಾಕಷ್ಟು ಸೇವಿಸುವುದರಿಂದ ಇದು ನವಜಾತ ಶಿಶುಗಳಲ್ಲಿ ನರನಾಳದ ದೋಷಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಅಲ್ಲದೇ ಫೋಲಿಕ್ ಆಮ್ಲವು ಶಿಶುಗಳಲ್ಲಿ ಸೀಳು ತುಟಿ, ಸೀಳು ನಾಲಿಗೆ ಮತ್ತು ಹೃದಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗೇ ಇದು ತಾಯಂದಿರಿಗೂ ಕೂಡ ಫೋಲಿಕ್ ಆಮ್ಲದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಸಾಕಷ್ಟು ಫೋಲಿಕ್ ಆಮ್ಲದ ಸೇವನೆ ಮಾಡುವುದರಿಂದ ಪ್ರಿಕ್ಲಾಂಪ್ಸಿಯಾ ಬೆಳೆಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ಅಂದರೆ ಈ ಸಮಸ್ಯೆ ಇರುವವರಲ್ಲಿ ಅಧಿಕ ರಕ್ತದೊತ್ತಡ, ಗರ್ಭಚೀಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದು ಮುಂತಾದ ಸಮಸ್ಯೆ ಕಾಡುತ್ತದೆ.

ಅಲ್ಲದೇ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ರಕ್ತದ ಪ್ರಮಾಣ ಹೆಚ್ಚಾಗಿರಬೇಕು. ಅದಕ್ಕಾಗಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಗತ್ಯವಿದೆ. ಹಾಗಾಗಿ ಫೋಲಿಕ್ ಆಮ್ಲದ ಸೇವನೆಯಿಂದ ಕಬ್ಬಿಣಾಂಶದ ಕೊರತೆಯ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ಮತ್ತು ಆಯಾಸ ಮತ್ತು ಸುಸ್ತು ಕಡಿಮೆಯಾಗುತ್ತದೆ.

ಫೋಲಿಕ್ ಆಮ್ಲದ ಸೇವನೆಯಿಂದ ಅವಧಿಗೂ ಮುನ್ನ ಹೆರಿಗೆ, ಕಡಿಮೆ ಜನನ ತೂಕ ಮತ್ತು ಶಿಶು ಮರಣದ ಅಪಾಯ ಕಡಿಮೆಯಾಗುತ್ತದೆ.

ಈ ಜೀವಸತ್ವಗಳು ಭ್ರೂಣದ ಬೆಳವಣಿಗೆಗೆ ಪ್ರಮುಖ ಕ್ಯಾಲ್ಸಿಯಂ ಅನ್ನು ಒದಗಿಸುತ್ತವೆ, ಮೂಳೆ ಮತ್ತು ದಂತಕವಚ ರಚನೆ, ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ನೀವು ಸೇವಿಸುವ ಪೋಷಕಾಂಶಗಳಲ್ಲಿ ಸಾಕಷ್ಟು ಪೋಲಿಕ್ಆಮ್ಲ ಇದ್ದರೆ ಅದು ರಿಕೆಟ್ಸ್ ಅನ್ನು ತಡೆಯುತ್ತದೆ, ಇದು ಮಕ್ಕಳಲ್ಲಿ ದುರ್ಬಲ ಮೂಳೆಗಳು ಮತ್ತು ದೇಹದ ಆಕಾರವನ್ನು ವಿಕಾರಗೊಳಿಸುವ ಸ್ಥಿತಿಯಾಗಿದೆ.

ಆರೋಗ್ಯಕರ ಆಹಾರ ಕ್ರಮದ ಜೊತೆಗೆ ನಿಮ್ಮ ವೈದ್ಯರ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ, ಗರ್ಭಿಣಿಯರು ಉತ್ತಮ ಜೀವಸತ್ವಗಳು ಮತ್ತು ಖನಿಜಗಳನ್ನು ಸೇವಿಸುವ ಮೂಲಕ ಆರೋಗ್ಯಕರ ಮಗುವನ್ನು ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...