ಯಾವುದೇ ಋತುವಿನಲ್ಲಾದರೂ ಸರಿಯೇ ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಇವರು ಬಹಳ ಬೇಗನೆ ಅನಾರೋಗ್ಯಕ್ಕೊಳಗಾಗುತ್ತಾರೆ. ಇದರ ಪರಿಣಾಮ ಮಗುವಿನ ಬೆಳವಣಿಗೆಯ ಮೇಲಾಗುತ್ತದೆ. ಹಾಗಾಗಿ ಋತುವಿನ ಬದಲಾವಣೆಯಿಂದಾಗುವ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ.
ಗರ್ಭಿಣಿಯರು ಸಾಕಷ್ಟು ನೀರನ್ನು ಕುಡಿಯಬೇಕು. ದಿನಕ್ಕೆ 3 ಲೀಟರ್ ನಷ್ಟು ನೀರನ್ನು ಕುಡಿಯಿರಿ. ಹಾಗೇ ಸಾಕಷ್ಟು ಹಣ್ಣುಗಳ ಜ್ಯೂಸ್ ಅನ್ನು ಸೇವಿಸಿ. ಇದರಿಂದ ಗರ್ಭದಲ್ಲಿ ನೀರಿನಾಂಶ ಕಡಿಮೆಯಾಗುವುದಿಲ್ಲ.
ಹಾಗೇ ಚಿಯಾ ಬೀಜಗಳು, ಅಗಸೆ ಬೀಜಗಳು, ಬಾದಾಮಿ, ವಾಲ್ ನಟ್ಸ್, ಮುಂತಾದ ಬೀಜಗಳನ್ನು ಸೇವಿಸಿ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡಿ ದೇಹವನ್ನು ಸದೃಢವಾಗಿಸುತ್ತದೆ. ಮತ್ತು ದೇಹವನ್ನು ಹೈಡ್ರೇಟ್ ಮಾಡುತ್ತದೆ.
ಗರ್ಭಿಣಿಯರಿಗೆ ಬೇಸಿಗೆಯಲ್ಲಿ ಸೌತೆಕಾಯಿ ತುಂಬಾ ಒಳ್ಳೆಯದು. ಹಾಗಾಗಿ ಮಧ್ಯಾಹ್ನದ ವೇಳೆ ಗರ್ಭಿಣಿಯರು ಸೌತೆಕಾಯಿಯನ್ನು ಸೇವಿಸಿ. ಇದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಹಾಗೇ ಇದರಲ್ಲಿ ನೀರಿನಾಂಶ ಅಧಿಕವಾಗಿರುವ ಕಾರಣ ಇದು ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸುತ್ತದೆ.
ಅಲ್ಲದೇ ಗರ್ಭಿಣಿಯರು ತಪ್ಪದೇ ಎಳನೀರನ್ನು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ. ಇದರಿಂದ ಸುಸ್ತು, ಆಯಾಸ ನಿವಾರಣೆಯಾಗುತ್ತದೆ.