ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನ, ಹಬ್ಬಕ್ಕೆ ಅದರದೆ ಆದ ಮಹತ್ವವಿದೆ. ಹಾಗೆ ಯಾವ ತಿಂಗಳಲ್ಲಿ ಯಾರು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ. ಜನನದಿಂದ ಹಿಡಿದು ಮರಣದವರೆಗೆ ಏನು ಮಾಡಬೇಕು ಎಂಬುದರಿಂದ ಹಿಡಿದು ಮರಣದ ನಂತ್ರ ಸಂಬಂಧಿಕರು ಏನೆಲ್ಲ ಮಾಡಬೇಕು ಎನ್ನುವ ಬಗ್ಗೆ ಎಲ್ಲ ವಿವರವಿದೆ. ಪೂರ್ವಜರಿಗಾಗಿಯೇ 15 ದಿನವನ್ನು ಮೀಸಲಿಡಲಾಗಿದೆ. ಈ ವರ್ಷದ ಪಿತೃಪಕ್ಷ ಶುರುವಾಗಿದೆ.
ಜನರು ಪೂರ್ವಜರ ಆರಾಧನೆ ಶುರು ಮಾಡಿದ್ದಾರೆ. ಗರ್ಭಿಣಿಯರು ಪಿತೃಪಕ್ಷದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಅದು ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರ ಜೊತೆ ಕೆಟ್ಟ ಆತ್ಮಗಳು ಭೂಮಿಗೆ ಬರುತ್ತವೆ. ಇದ್ರಿಂದ ಗರ್ಭಿಣಿಯರು ಎಚ್ಚರವಾಗಿರಬೇಕು.
ಪಿತೃಪಕ್ಷದಲ್ಲಿ ನಿರ್ಜನ ಪ್ರದೇಶ ಅಥವಾ ಕಾಡಿನ ಕಡೆ ಹೋಗಬಾರದು. ಇದು ಗರ್ಭಿಣಿ ಹಾಗೂ ಮಗುವಿನ ಮೇಲೆ ಕಟ್ಟ ಪರಿಣಾಮ ಬೀರುತ್ತದೆ. ಹಾಗೆ ಸ್ಮಶಾನಕ್ಕೂ ಗರ್ಭಿಣಿಯರು ಹೋಗಬಾರದು. ಕೆಟ್ಟ ಆತ್ಮಗಳು ಗರ್ಭಿಣಿ ಹಾಗೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.