ತನ್ನ ಮೊದಲ ಮಗುವಿನ ಡೆಲಿವರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮಗುವಿನ ಜನನದ ಹಂತದ ಪ್ರಕ್ರಿಯೆಗಳನ್ನು ಗಮನಿಸಲು ವೈದ್ಯಕೀಯ ವಿಜ್ಞಾನದ 20 ವಿದ್ಯಾರ್ಥಿಗಳನ್ನು ತಮ್ಮೊಂದಿಗೆ ವೈದ್ಯರು ಕರೆತಂದಿದ್ದನ್ನು ನೋಡಿದ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ.
ಜೆಸ್ಸಿಕಾ ಎನ್‌ಸ್ಲೋ ಹೆಸರಿನ ಈ ಮಹಿಳೆಗೆ ಈಗ ಏಳು ಮಕ್ಕಳಿದ್ದು, ಮೊದಲ ಹೆರಿಗೆ 1994ರಲ್ಲಿ ಆಗಿದೆ. ಜೆಸ್ಸಿಕಾ ಪತಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಆಕೆಯ ಮೊದಲ ಹೆರಿಗೆ ಮಿಲಿಟರಿ ಆಸ್ಪತ್ರೆಯೊಂದರಲ್ಲಿ ಆಗಿದೆ.
ಮೆಡಿಕಲ್, ಡೆಂಟಲ್ ಪ್ರವೇಶಕ್ಕೆ ಪಿಜಿ ನೀಟ್ ಪರೀಕ್ಷೆ ಬಗ್ಗೆ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
ಆದರೆ ತನ್ನ ಪತಿಯ ಕೆಲಸಕ್ಕೆ ತೊಂದರೆಯಾಗದಿರಲಿ ಎಂದು ಜೆಸ್ಸಿಕಾ ಈ ವಿಚಾರದ ಬಗ್ಗೆ ಬಹಳ ದಿನಗಳವರೆಗೂ ಏನೂ ಹೇಳಿರಲಿಲ್ಲ.
“ಮಿಲಿಟರಿ ಆಸ್ಪತ್ರೆಗಳಲ್ಲಿನ ಮ್ಯಾನರ್‌ಗಳು ಈಗಲಾದರೂ ಸುಧಾರಿಸಿವೆ ಎಂದು ಆಶಿಸುತ್ತೇನೆ” ಎಂದು ಜೆಸ್ಸಿಕಾ ಟಿಕ್‌ಟಾಕ್ ನ ತಮ್ಮ ವಿಡಿಯೋ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.