alex Certify ಕಾಮದಾಹಕ್ಕೆ ಜೀವವೇ ಹೋಯ್ತು..! ಸೆಕ್ಸ್ ಗೆ ಬಲವಂತ – ಗರ್ಭಿಣಿಯಿಂದಲೇ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದಾಹಕ್ಕೆ ಜೀವವೇ ಹೋಯ್ತು..! ಸೆಕ್ಸ್ ಗೆ ಬಲವಂತ – ಗರ್ಭಿಣಿಯಿಂದಲೇ ಆಘಾತಕಾರಿ ಕೃತ್ಯ

ಈರೋಡ್: ತಮಿಳುನಾಡಿನ ಈರೋಡ್ ನಲ್ಲಿ ಲೈಂಗಿಕಕ್ರಿಯೆಗೆ ಬಲವಂತ ಮಾಡಿದ ಗಂಡನನ್ನೆ ಮಹಿಳೆ ಕೊಲೆ ಮಾಡಿದ ಘಟನೆ ನಡೆದಿದೆ.

21 ವರ್ಷದ ಮಹಿಳೆ ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದಾಳೆ. ಸೆಕ್ಸ್ ಗೆ ಬಲವಂತ ಮಾಡಿದ ಗಂಡನಿಗೆ ಕೀಟನಾಶಕ ಮಿಶ್ರಿತ ಆಹಾರ ನೀಡಿ ಕೊಲೆ ಮಾಡಿದ್ದಾಳೆ. ಪೇರಿಯಮೋಲಪಾಲಯಂ ನಿವಾಸಿಯಾಗಿರುವ 21 ವರ್ಷದ ಮಹಿಳೆ ಮೈಥಿಲಿ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ.

8 ತಿಂಗಳ ಹಿಂದೆ ಅಂಧಿಯೂರ್ ಬಳಿಯ ಕಲಿಯನ್ನನ್ ತೊಟ್ಟಂ ನಿವಾಸಿ ಎನ್. ನಂದಕುಮಾರ್ ಜೊತೆಗೆ ಆಕೆಗೆ ಮದುವೆಯಾಗಿತ್ತು. ನಂದಕುಮಾರ್ ಕೃಷಿಕನಾಗಿ ಕೆಲಸ ಮಾಡುತ್ತಿದ್ದು, ಮೈಥಿಲಿಯೊಂದಿಗೆ ಎರಡನೇ ಮದುವೆಯಾಗಿದ್ದ. ಗರ್ಭಿಣಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಗೆ ಆತ ಬಲವಂತಮಾಡಿ ಹಿಂಸೆ ನೀಡಿದ್ದ.

ಸೆಕ್ಸ್ ಗಾಗಿ ಪೀಡಿಸುತ್ತಿದ್ದ ಗಂಡನ ಕಾಟ ತಾಳದೇ ಜನವರಿ 28 ರಂದು ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದ ಮೈತಿಲಿ ಕೀಟನಾಶಕ ಬೆರೆಸಿದ ಆಹಾರ ನೀಡಿದ್ದಾಳೆ. ಇದರಿಂದಾಗಿ ಆತನಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಜನವರಿ 31 ರಂದು ಅಂದಿಯೂರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 15 ರಂದು ಆತ ಕೊನೆಯುಸಿರೆಳೆದಿದ್ದಾನೆ.

ಆಸ್ಪತ್ರೆಯ ಆಡಳಿತ ಮಂಡಳಿಯವರು ಪೊಲೀಸರಿಗೆ ಈ ಕುರಿತಾಗಿ ಮಾಹಿತಿ ನೀಡಿದ್ದರು. ಈ ನಡುವೆ ಮೈಥಿಲಿ ಪೊಲೀಸರಿಗೆ ಶರಣಾಗಿ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಲಾಗಿದ್ದು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಆಂಧಿಯೂರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸ್. ರವಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...