ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬಳ ವಿಚಾರ ಬಿಸಿ ಬಿಸಿ ಚರ್ಚೆಯಲ್ಲಿದೆ. ಮಹಿಳೆ ಇ-ಮಗುವಿಗೆ ಜನ್ಮ ನೀಡಿದ್ದಾಳೆ. ಸ್ಟೆಪ್ನಿ ಟೈಲರ್ ಹೆಸರಿನ ಮಹಿಳೆ, ಮೊದಲ ಪತಿಯಿಂದ ದೂರವಾಗಿದ್ದಾಳೆ. ಆಕೆಗೆ ಈಗಾಗಲೇ 5 ವರ್ಷದ ಮಗನಿದ್ದಾನೆ.
ಸ್ಟೆಪ್ನಿ ಇನ್ನೊಂದು ಮಗುವಿಗೆ ಜನ್ಮ ನೀಡುವ ಆಸೆಯಲ್ಲಿದ್ದಳು. ಆದ್ರೆ ಆಕೆಗೆ ಬೇರೆ ಪುರುಷನ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಇಷ್ಟವಿರಲಿಲ್ಲ. ಆಕೆ ಸ್ನೇಹಿತರೊಬ್ಬರು ವೆಬ್ಸೈಟ್ ಒಂದರ ಬಗ್ಗೆ ಹೇಳಿದ್ದಾರೆ. ಸ್ಟೆಪ್ನಿ, ಬೇಬಿ ಅಪ್ಲಿಕೇಷನ್ ನಲ್ಲಿ ವೀರ್ಯ ಹಾಗೂ ಕಿಟ್ ಆರ್ಡರ್ ಮಾಡಿದ್ದಾಳೆ. ವಿಶೇಷವೆಂದ್ರೆ ಯಾವ ವ್ಯಕ್ತಿಯಿಂದ ಸ್ಟೆಪ್ನಿ ವೀರ್ಯ ಪಡೆಯಲು ಇಚ್ಛಿಸಿದ್ದಳೋ ಅದೇ ವ್ಯಕ್ತಿ ಮನೆಗೆ ಬಂದು ವೀರ್ಯ ನೀಡಿದ್ದನಂತೆ.
ಯುಟ್ಯೂಬ್ ನೋಡಿ, ಸ್ಟೆಪ್ನಿ ಕಿಟ್ ಬಳಸಿದ್ದಾಳೆ. ಮೊದಲ ಪ್ರಯತ್ನದಲ್ಲಿಯೇ ಸ್ಟೆಪ್ನಿ ಗರ್ಭ ಧರಿಸಿದ್ದಾಳೆ. ಈಗ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಇದೊಂದು ಚಮತ್ಕಾರ ಎನ್ನುವ ಮಹಿಳೆ, ಇದನ್ನು ರಿಯಲ್ ಆನ್ಲೈನ್ ಬೇಬಿ ಎಂದಿದ್ದಾಳೆ. ಮಗುವಿಗೆ ಈಡನ್ ಎಂದು ಹೆಸರಿಟ್ಟಿದ್ದಾಳೆ.
ಆರಂಭದಲ್ಲಿ ಸ್ಟೆಪ್ನಿ ತಂದೆ, ಮಗುವನ್ನು ಸ್ವೀಕರಿಸಲು ನಿರಾಕರಿಸಿದ್ದನಂತೆ. ಆದ್ರೆ ಈಗ ಸ್ಟೆಪ್ನಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ತಾಯಿ ಹಾಗೂ ಸಹೋದರಿ ಈಡನ್ ಆಗಮನದಿಂದ ಖುಷಿಯಾಗಿದ್ದಾರೆಂದು ಆಕೆ ಹೇಳಿದ್ದಾಳೆ.