ಬೆಂಗಳೂರು: ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಕಿಟ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ನಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.
ತಾಯಿ, ಮಗುವಿನ ಪೋಷಣೆಗೆ ಬಿ.ಎಸ್.ವೈ. ಕಿಟ್ ನೀಡಲಾಗುವುದು. ಬಹು ಧಾನ್ಯಗಳಿಂದ ತಯಾರಿಸಲಾದ ಗೋಧಿಹಿಟ್ಟು, ತುಪ್ಪ, ಒಣಗಿಸಿದ ನೆಲ್ಲಿಕಾಯಿ ಚೂರು, ಬಾದಾಮಿ, ಕರ್ಜೂರ ಮೊದಲಾದ ಪದಾರ್ಥಗಳನ್ನೊಳಗೊಂಡ ಕಿಟ್ ನೀಡಲಾಗುವುದು. ಮುಂದೆ ಇನ್ನೂ ಹೆಚ್ಚಿನ ಪೂರಕ ಪೋಷಕಾಂಶಗಳನ್ನು ನೀಡಲು ಚಿಂತನೆ ನಡೆಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ.ಎಸ್.ವೈ. ಕಿಟ್ ನೀಡುವ ಪ್ರಸ್ತಾಪ ಸಲ್ಲಿಸಿದ್ದು ಬಜೆಟ್ ನಲ್ಲಿ ಘೋಷಣೆಯಾಗಿ ಏಪ್ರಿಲ್ ನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಪೌಷ್ಟಿಕಾಂಶ, ವಿಟಮಿನ್ಸ್, ಪ್ರೊಟೀನ್ಸ್ ಕ್ಯಾಲ್ಸಿಯಂಯುಕ್ತ ಆಹಾರ ಕಿಟ್ ನೀಡಲು ಯೋಜಿಸಲಾಗಿದೆ.