
ಗರ್ಭಪಾತ ಮಿತಿಯನ್ನು 24 ವಾರಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದ್ದು, ವೈದ್ಯಕೀಯ ವಿಧಾನ ಮೂಲಕ ಗರ್ಭಪಾತಕ್ಕೆ ಇದ್ದ 20 ವಾರಗಳ ಮಿತಿಯನ್ನು 24 ವಾರಗಳವರೆಗೆ ವಿಸ್ತರಿಸಿ ಗರ್ಭಪಾತ ತಿದ್ದುಪಡಿ ಕಾಯ್ದೆ -2018 ಜಾರಿಗೊಳಿಸಲಾಗಿದೆ.
ಸಾರ್ವತ್ರಿಕವಾಗಿ ಎಲ್ಲರಿಗೂ ಗರ್ಭಪಾತ ಮಿತಿ 24 ವಾರಗಳಿಗೆ ವಿಸ್ತರಿಸಿದ ನಿಯಮ ಅನ್ವಯವಾಗುವುದಿಲ್ಲ. ಅಪ್ರಾಪ್ತ ವಯಸ್ಕರು, ಅತ್ಯಾಚಾರ ಸಂತ್ರಸ್ತರು, ಮಾರಣಾಂತಿಕ ಅಸಹಜತೆ ಹೊಂದಿದವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಉಳಿದಂತೆ ಸಾಮಾನ್ಯ ಸಂದರ್ಭಗಳಲ್ಲಿ ಈಗಿರುವ 20 ವಾರಗಳ ನಿಯಮವೇ ಅನ್ವಯವಾಗಲಿದೆ. ಜಾರಿಗೆ ಬಂದ ಗರ್ಭಪಾತ ಮಿತಿ ಕಾಯ್ದೆಯಲ್ಲಿ ಕೆಲ ಗೊಂದಲಗಳಿವೆ ಎಂದು ಹೇಳಲಾಗಿದೆ.