ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಮದುವೆಗೆ ಮುಂಚೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲೇಬೇಕು ಅನ್ನೋದು ನಿಯಮದ ತರಹ ಆಗಿದೆ. ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಮಾಡಬೇಕು ಅಂತಾ ಹೊಸ-ಹೊಸ ಐಡಿಯಾದೊಂದಿಗೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಂದೆಡೆ ನೂತನ ವಧು-ವರ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಲು ಹೋಗಿ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಹೌದು, ಗುಲಾಮಗಿರಿಯನ್ನು ಸಂಕೇತಿಸುವ ರೀತಿಯಲ್ಲಿ ಈ ದಂಪತಿ ಫೋಟೋ ಶೂಟ್ ಮಾಡಿಸಿ ಅದನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ಕಬ್ಬಿನ ಗದ್ದೆಯ ಬಳಿ ಫೋಟೋಶೂಟ್ ಮಾಡಿಸಿದ್ದು, ಯುವಕನ ಕೈಗೆ ಕೋಳಗಳನ್ನು ತೊಡಿಸಲಾಗಿದೆ. ಇಲ್ಲಿನ ಯುವತಿಯು ಯುವಕನ ಕೈಗಳಿಗೆ ಕೋಳ ತೊಡಿಸಿದ್ದಾಳೆ. ಯುವಕ ಪ್ರೀತಿಯಿಂದಲೇ ಕೋಳ ತೊಡಿಸಿಕೊಂಡಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೆಂಗಣ್ಣು ಬೀರಿದ್ದಾರೆ.
ಇಲ್ಲಿ ಯುವತಿಯು ಬಿಳಿ ಬಣ್ಣದವಳಾಗಿದ್ದರೆ ಯುವಕ ಕಪ್ಪು ಬಣ್ಣ ಹೊಂದಿದ್ದಾನೆ. ಹೀಗಾಗಿ ಇದೊಂದು ಜನಾಂಗೀಯ ತಾರತಮ್ಯ ಅಂತಾ ನೆಟ್ಟಿಗರು ಟೀಕಿಸಿದ್ದಾರೆ. ಗುಲಾಮಗಿರಿ, ಜನಾಂಗಿಯ ತಾರತಮ್ಯ, ಬಿಳಿಜನ, ಕಪ್ಪುಟಿಕ್ ಟಾಕ್ ಮುಂತಾದವುಗಳಿಗೆ ಹ್ಯಾಷ್ ಟಾಗ್ ಗಳನ್ನು ಹಾಕುವ ಮುಖಾಂತರ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ.