alex Certify ʻSC-STʼ ವರ್ಗದವರಿಗೆ ʻಸೇನೆ/ಪೊಲೀಸ್ ಸೇರಿ ಸಮವಸ್ತ್ರ ಸೇವೆʼಗಳ ಪರೀಕ್ಷಾ ಪೂರ್ವ ತರಬೇತಿ : ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻSC-STʼ ವರ್ಗದವರಿಗೆ ʻಸೇನೆ/ಪೊಲೀಸ್ ಸೇರಿ ಸಮವಸ್ತ್ರ ಸೇವೆʼಗಳ ಪರೀಕ್ಷಾ ಪೂರ್ವ ತರಬೇತಿ : ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

ಬೆಂಗಳೂರು : ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಂದ ಸಮವಸ್ತ್ರ ಸೇವೆಗಳಿಗೆ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತರು ಇದೇ ಡಿಸೆಂಬರ್‌ 10, 2023ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸೇನೆ/ಪೊಲೀಸ್ ಸೇರಿದಂತೆ ಸಮವಸ್ತ್ರಸೇವೆಗಳ ಪರೀಕ್ಷಾಪೂರ್ವ ತರಬೇತಿ

ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಂದ ಭಾರತೀಯ ಸೇನೆ, ರಾಜ್ಯ ಪೊಲೀಸ್ ಸೇವೆ ಸೇರಿದಂತೆ ಇತರೆ ಸರ್ಕಾರಿ ಸಮವಸ್ತ್ರ ಸೇವೆಗಳಿಗೆ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

  • ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿರಬೇಕು
  • ಕನಿಷ್ಠ 10ನೇ ತರಗತಿ ಉತ್ತೀರ್ಣವಾಗಿರಬೇಕು
  • 17 ವರ್ಷ 6 ತಿಂಗಳುಗಳಿಂದ 23 ವರ್ಷದ ವಯೋಮಾನದ ಒಳಗಿರಬೇಕು
  • ಕುಟುಂಬದ ವಾರ್ಷಿಕ ಆದಾಯ ರೂ.5.00 ಲಕ್ಷ ಮೀರಿರಬಾರದು

ಆಸಕ್ತರು ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕೃತ ಜಾಲತಾಣ https://sw.kar.nic.in & .

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕಲ್ಯಾಣ ಮಿತ್ರ 24X7 ಸಹಾಯವಾಣಿ 9482 300 400 ಅಥವಾ ಟ್ವಿಟ್ಟರ್ ಖಾತೆ @SWDGOK

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...