
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜೊತೆಯಾಗಿದ್ದ ಯುವಕ ಯುವತಿಯ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು ಹುಡುಗಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಘಟನೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ವಿಡಿಯೋ ವೈರಲ್ ಆಗಿದೆ.
ಪ್ರಯಾಗ್ ರಾಜ್ ಜಿಲ್ಲೆಯ ಮೌಯಿಮಾ ಪ್ರದೇಶದಲ್ಲಿ ಘಟನೆ ನಡೆದಿದೆ. ಮೌಯಿಮಾದ ಸಿಸೈ ಸಿಪಾ ಪ್ರದೇಶದ ನದಿಯ ದಡದಲ್ಲಿ ಯುವತಿ ಮತ್ತು ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಹುಡುಗ ಮಾತನಾಡುತ್ತಿದ್ದ ಕುಳಿತುಕೊಂಡಿದ್ದ ವೇಳೆ ಮೂವರು ಯುವಕರು ಆಗಮಿಸಿದ್ದು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಹುಡುಗಿಗೆ ಕಿರುಕುಳ ನೀಡಿ ವಿಡಿಯೋ ಮಾಡಿಕೊಂಡಿದ್ದಾರೆ.
ವಿಡಿಯೋ ವೈರಲ್ ಆಗಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೌಯಿಮಾ ಪೊಲೀಸ್ ಠಾಣೆಯ ಉಸ್ತುವಾರಿ ಸುರೇಶ್ ಸಿಂಗ್ ಅವರು ಮಾಹಿತಿ ನೀಡಿ, ಗನ್ ಸಿಸಾಯಿ ಸಿಪಾಹ್ ನಿವಾಸಿಗಳಾದ ಶಫೀಕ್, ಖಯ್ಯೂಮ್ ಮತ್ತು ಮಸಿಕ್ ಎಂಬ ಮೂವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.