ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಮುಖ ಸಂಚುಕೋರ ಮುಸ್ತಾಫ ಪೈಚಾರ್ ಗೆ ಆಶ್ರಯ ನೀಡಿದ ಮನ್ಸೂರ್ ಪಾಷಾ, ಸೈಯದ್ ರಿಯಾಜ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಿದೆ. 2022 ರಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎನ್ಐಎ 2022ರ ಆಗಸ್ಟ್ 4ರಂದು ಪ್ರಕರಣವನ್ನು ಮರು ದಾಖಲಿಸಿದ್ದು, ಇದುವರೆಗೆ 19 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಮುಸ್ತಾಫ ಪೈಚಾರ್ ನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮೇ 10ರಂದು ಮನ್ಸೂರ್ ಪಾಷಾ ಎಂಬುವನ ಜೊತೆಗೆ ಬಂಧಿಸಲಾಗಿತ್ತು. ಮುಸ್ತಫಾ ಪ್ರಕರಣದ ಪ್ರಮುಖ ಸಂಚುಕೋರನಾಗಿದ್ದು, ರಾಜ್ಯದಲ್ಲಿ ಪಿಎಫ್ಐ ಸೇವಾ ತಂಡದ ಮಾಸ್ಟರ್ ಟ್ರೈನರ್ ಆಗಿದ್ದ.