
ಜಗತ್ತಿನ ಅತ್ಯಂತ ಪುಟಾಣಿ ಬಾಡಿಬಿಲ್ಡರ್ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ ಪಾತ್ರರಾಗಿದ್ದಾರೆ. ಪ್ರತೀಕ್ 102 ಸೆಂಮೀ (3ಅಡಿ 4 ಇಂಚು) ಉದ್ದವಿದ್ದಾರೆ.
2012ರಲ್ಲಿ ಬಾಡಿಬಿಲ್ಡಿಂಗ್ ವೃತ್ತಿ ಆರಂಭಿಸಿದ ಪ್ರತೀಕ್, ಮೊದಲಿಗೆ ಜಿಮ್‌ನಲ್ಲಿ ಸಲಕರಣೆಗಳನ್ನು ಹಿಡಿಯಲೂ ಸಹ ಕಷ್ಟಪಡುತ್ತಿದ್ದರು.
ಕರೂರಿನಲ್ಲಿ ಲಸಿಕೆ ಪಡೆಯುವವರಿಗೆ ಉಡುಗೊರೆಗಳ ಸುರಿಮಳೆ…!
“ನಾನು ದುರ್ಬಲ ಎಂದು ಜನರು ಭಾವಿಸಿದ್ದರು” ಎನ್ನುವ ಪ್ರತೀಕ್ ಕಠಿಣ ಪರಿಶ್ರಮದಿಂದ ಏನೆಲ್ಲಾ ಸಾಧಿಸಬಹುದು ಎಂದು ಸಾಬೀತು ಮಾಡಿದ್ದಾರೆ.
2016ರಲ್ಲಿ ಮೊದಲ ಬಾರಿಗೆ ಸ್ಫರ್ಧಾತ್ಮಕ ಬಾಡಿಬಿಲ್ಡಿಂಗ್ ಕೂಟದಲ್ಲಿ ಭಾಗವಹಿಸಿದ ಪ್ರತೀಕ್, ಅಲ್ಲಿಂದ ಆಚೆಗೆ 40ಕ್ಕೂ ಹೆಚ್ಚು ಕೂಟಗಳಲ್ಲಿ ಭಾಗಿಯಾಗಿದ್ದಾರೆ.
ಮುಂಜಾನೆ 30 ನಿಮಿಷಗಳ ಓಟದ ಬಳಿಕ ಆರೋಗ್ಯಯುತ ಉಪಹಾರ ಸೇವಿಸಿ ಎರಡು ಗಂಟೆಗಳ ಕಾಲ ಜಿಮ್‌ನಲ್ಲಿ ಕಸರತ್ತು ಮಾಡುವ ಪ್ರತೀಕ್, ಇನ್‌ಸ್ಟಾಗ್ರಾಂನಲ್ಲಿ ತಮ್ಮ ವರ್ಕ್‌ಔಟ್ ಬಗ್ಗೆ ಅನುಯಾಯಿಗಳಿಗೆ ಅಪ್ಡೇಟ್ ಮಾಡುತ್ತಿರುತ್ತಾರೆ.
ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ: ಸೇವೆ ಮುಂದುವರೆಸಲು ಸರ್ಕಾರದ ನಿರ್ಧಾರ
“ಗಿನ್ನೆಸ್ ದಾಖಲೆಗೆ ಭಾಜನನಾಗುವುದು ನನ್ನ ಕನಸಾಗಿತ್ತು. ಅದನ್ನು ಸಾಧಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಇಲ್ಲಿವರೆಗೂ ನನ್ನ ಅತಿ ದೊಡ್ಡ ಸಾಧನೆ ಇದಾಗಿದ್ದು ನನಗೆ ಬಹಳ ಸಂತೋಷವಾಗಿದೆ,” ಎಂದು ಪ್ರತೀಕ್ ತಿಳಿಸಿದ್ದಾರೆ.
ಭವಿಷ್ಯದಲ್ಲಿ ತಮ್ಮದೇ ಜಿಮ್ ತೆರೆದು ಸಮಾನ ಮನಸ್ಕ ಅಥ್ಲೀಟ್‌ಗಳಿಗೆ ನೆರವಾಗುವುದು ಪ್ರತೀಕ್ ಕನಸಾಗಿದೆ.