![ಫಸ್ಟ್ ನೈಟ್ ವಿತ್ ದೆವ್ವ' ಅಂತಾರೆ ಪ್ರಥಮ್: ಫೋಟೋ ವೈರಲ್](https://i0.wp.com/publictv.in/wp-content/uploads/2023/11/pratham-2-1.jpg?fit=800%2C450&ssl=1)
ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಫಸ್ಟ್ ನೈಟ್ ದೆವ್ವ’ ಚಿತ್ರ ತನ್ನ ಮೂಲಕವೇ ಸಕ್ಕತ್ ಸೌಂಡ್ ಮಾಡಿದ್ದ ಶೀಘ್ರದಲ್ಲೇ ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಸಿನಿಮಾ ಫಸ್ಟ್ ಲುಕ್ ಟೀಸರ್ ನಾಳೆ ಸಂಜೆ 5:00 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಪ್ರಥಮ್ ತಮ್ಮ instagram ನಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಸ್ವಾರಸ್ಯ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ನವೀನ್ ಬೀರಪ್ಪ ನಿರ್ಮಾಣ ಮಾಡಿದ್ದು, ಆದ್ವಿಕ್ ಎಸ್ ವರ್ಮ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪ್ರಥಮ್ ಸೇರಿದಂತೆ ಸಂಗೀತಾ, ನಿಖಿತ, ಶ್ರೀನಿವಾಸಮೂರ್ತಿ, ಮಾನ್ಯ ಸಿಂಗ್, ಹರೀಶ್ ರಾಜ್, ತನುಜಾ, ತೆರೆ ಹಂಚಿಕೊಂಡಿದ್ದಾರೆ. ನಾರಾಯಣ್ ಆಚಾರ್ಯ ಸಂಕಲನ, ಪಿ ವಿ ಆರ್ ಸ್ವಾಮಿ ಗೂಗಾರ ದೊಡ್ಡಿ ಛಾಯಾಗ್ರಹಣ, ನಾಗೇಶ್ ಎನ್ ಸಂಭಾಷಣೆ ಬರೆದಿದ್ದಾರೆ.
![](https://kannadadunia.com/wp-content/uploads/2024/02/a71fa256-32f2-45f0-a651-b45d0c2291b7-400x590.jpg)