ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಈಗ ಸಂಕಷ್ಟ ಎದುರಾದಾಗ ಹಿಂದೂ ದೇವರ ನೆನಪಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಕಷ್ಟ ಬಂದಾಗ ನಮ್ಮ ದೇವರ ನೆನಪಾಗಿದೆ. ಚಾಮುಂಡಿ ತಾಯಿ, ಹಾಸನಾಂಬೆ ತಾಯಿ ನೆನಪಾಗಿದ್ದಾರೆ. ಕಷ್ಟ ಬಂದಾಗ ಸಹಾಯಕ್ಕೆ ಬರುವುದು ನಮ್ಮ ದೇವಾನುದೇವತೆಗಳೇ ಹೊರತು ಬೇರೆ ಧರ್ಮದವರಲ್ಲ ಎಂದು ಹೇಳಿದರು.
ಈಗ ಸಿಎಂ ಸಿದ್ದರಾಮಯ್ಯ ಹಿಂದೂಗಳ ವಿರುದ್ಧ ನಿಲುವು ತೆಗೆದುಕೊಳ್ಳಲ್ಲ ಎಂದುಕೊಂಡಿದ್ದೇನೆ. ಪ್ರಧಾನಿ ಮೋದಿಯವರು ಮೊದಲು ವಕ್ಫ್ ಕಾಯ್ದೆ, ವಕ್ಫ್ ಬೋರ್ಡ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮುಡಾ ಹಗರಣದ ಬಗ್ಗೆ ಇಡಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಇಡಿ ತನಿಖೆ ಆರಂಭವಾದ ಮೇಲೆ ಮುಡಾ ಕ್ಲೀನ್ ಆಗಬಹುದು ಎಂಬ ನಂಬಿಕೆ ಬಂದಿದೆ. ಮೈಸೂರಿಗೆ ಒಳ್ಳೆಯ ನಗರಾಭಿವೃದ್ಧಿ ಪ್ರಧಿಕಾರ ಬೇಕು. ಒಳ್ಳೆ ಜನಪ್ರತಿನಿಧಿಗಳು ಬೇಕು.