ಮುಖಿಯಾ ಗುರ್ಜರ್ ಎನ್ನುವ ಎಸ್ಪಿ ನಾಯಕರೊಬ್ಬರು ಸಾಕಷ್ಟು ವಿವಾದಾದ್ಮಕ ಹೇಳಿಕೆಗಳಿಂದ ಭಾರಿ ಟೀಕೆಗೆ ಒಳಗಾಗಿದ್ದಾರೆ. ಉತ್ತರ ಪ್ರದೇಶದ ಹಸನ್ ಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಎಂಎಲ್ಎ ಕ್ಯಾಂಡಿಡೇಟ್ ಆಗಿರುವ ಗುರ್ಜರ್ ವಿರುದ್ಧ ಕೋವಿಡ್ ನಿಯಮಗಳನ್ನ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಕ್ರಮದ ಬಗ್ಗೆ ಅಸಮಾಧಾನಗೊಂಡಿರುವ ಗುರ್ಜರ್ ಪೊಲೀಸ್ ಹಾಗೂ ಆಡಳಿತದ ಬಗ್ಗೆ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ. “ಪ್ರಶಾಸನ್ ಕಿ ಐಸಿ ಕಿ ತೈಸಿ, 16 ಬಾರ್ ಜೈಲ್ ಜಾ ಚುಕಾ ಹೂಂ” ಎಂದು ಪೊಲೀಸ್ ಮತ್ತು ಸರಕಾರದ ವಿರುದ್ಧ ಗುರ್ಜರ್ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ತಮ್ಮ ಅನುಯಾಯಿಗಳಿಗೆ ಚುನಾವಣಾ ಭರವಸೆ ನೀಡುತ್ತಾ, ನಾನು ಎಲೆಕ್ಟ್ ಆದಮೇಲೆ ಭ್ರಷ್ಟಾಚಾರದಿಂದ ಅಪಾರ ಆಸ್ತಿ ಮಾಡಿರುವ ಹಾಲಿ ಶಾಸಕರನ್ನು ಲೂಟಿ ಮಾಡಿ ನಿಮಗೆ ಹಂಚುತ್ತೇನೆ ಎಂದು ಗುರ್ಜರ್ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಕಟ್ಟಾ ಬೆಂಬಲಿಗನೆಂದು ಸ್ವಯಂ ಘೋಷಿಸಿಕೊಂಡಿರುವ ಮುಖಿಯಾ ಗುರ್ಜರ್ ಬಿಜೆಪಿಗೆ ರಾಜೀನಾಮೆ ನೀಡಿ ಇತ್ತೀಚೆಗೆ ಸಮಾಜವಾದಿ ಪಕ್ಷ ಸೇರಿದ್ದಾರೆ.