ಬೆಂಗಳೂರು: ರೈಲಿನ ಡಸ್ಟ್ ಬಿನ್ ನಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಭುವನೇಶ್ವರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಕಸದ ಡಬ್ಬಿಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಇದನ್ನು ಕಂಡು ರೈಲ್ವೆ ಸಿಬ್ಬಂದಿಗಳು ಶಾಕ್ ಆಗಿದ್ದಾರೆ.
ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ರೈಲಿನ ಕಸದ ಡಬ್ಬಿಗೆ ಹಾಕಲಾಗಿತ್ತು. ರೈಲು ಬೆಂಗಳೂರಿನ ಯಲಹಂಕ ನಿಲ್ದಾಣಕ್ಕೆ ಬಂದ ಬಳಿಕ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆಗೆ ಮುಂದಾದ ವೇಳೆ ಡಸ್ಟ್ ಬಿನ್ ನಲ್ಲಿ ಮಗು ಪತ್ತೆಯಾಗಿದೆ.
ರೈಲಿನಲ್ಲಿಯೇ ತಾಯಿ ಹೆರಿಗೆಯಾಗಿದ್ದು, ಬಳಿಕ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಡಸ್ಟ್ ಬಿನ್ ಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಪತ್ತೆಯಾಗಿರುವ ನವಜಾತ ಶಿಶು ಅದಾಗಲೇ ಸಾವನ್ನಪ್ಪಿದ್ದು, ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.