ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ಕೊನೆಗೊಳಿಸುವುದಾಗಿ ಜನ್ ಸೂರಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಭರವಸೆ ನೀಡಿದ್ದಾರೆ.
ಅಕ್ಟೋಬರ್ 2 ರಂದು ತನ್ನ ಪಕ್ಷದ ಸಂಸ್ಥಾಪನಾ ದಿನದ ಮೊದಲು ಪ್ರಶಾಂತ್ ಕಿಶೋರ್ ಶನಿವಾರ ಈ ಘೋಷಣೆ ಮಾಡಿದ್ದಾರೆ. ಅಧಿಕಾರಕ್ಕೆ ಆಯ್ಕೆಯಾದರೆ ಬಿಹಾರದಲ್ಲಿ ಮದ್ಯ ನಿಷೇಧವನ್ನು ತಕ್ಷಣವೇ ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕಿಶೋರ್, ಅ. 2ಕ್ಕೆ ಯಾವುದೇ ವಿಶೇಷ ತಯಾರಿ ಅಗತ್ಯವಿಲ್ಲ, ಕಳೆದ ಎರಡು ವರ್ಷಗಳಿಂದ ನಾವು ಸಿದ್ಧತೆ ನಡೆಸಿದ್ದೇವೆ, ಜನ್ ಸೂರಜ್ ಸರ್ಕಾರ ರಚನೆಯಾದರೆ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ಕೊನೆಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.