ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ದೇಹದ ಎಲ್ಲ ಭಾಗಕ್ಕೆ ಆಮ್ಲಜನಕದ ಹರಿವು ಉತ್ತಮವಾಗಿರಬೇಕು. ಪ್ರಾಣಾಯಾಮದಿಂದ ಇದೆಲ್ಲ ಸಾಧ್ಯವಿದೆ.
ಒಂದು ಗಂಟೆ ಪ್ರಾಣಾಯಾಮ ಮಾಡುವುದ್ರಿಂದ ಆರೋಗ್ಯವಾಗಿರುವ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ.
ಪ್ರಾಣಾಯಾಮ ಒಂದು ಕಲೆ. ಅದನ್ನು ನಿಧಾನವಾಗಿ ಅಭ್ಯಾಸ ಮಾಡಬೇಕು. ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಲು ಕೆಲವೊಂದು ಪ್ರಾಣಾಯಮ ಬಹಳ ಮುಖ್ಯ.
ಉಸಿರಾಟದ ವ್ಯಾಯಾಮ : ಓಂ ಉಚ್ಚಾರವನ್ನು ಮಾಡುತ್ತ ಉಸಿರನ್ನು ಎಳೆದುಕೊಂಡು ನಿಧಾನವಾಗಿ ನಿಮ್ಮ ಉಸಿರನ್ನು ಬಿಡಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಸಿರನ್ನು ಎಳೆದುಕೊಳ್ಳಿ ಹಾಗೂ ಬಿಡಿ.
ಕಿಬ್ಬೊಟ್ಟೆಯ ಉಸಿರಾಟದ ಪ್ರಾಣಾಯಾಮ. ಹೊಟ್ಟೆಯವರೆಗೆ ಉಸಿರನ್ನು ಎಳೆದುಕೊಂಡು ನಿಧಾನವಾಗಿ ಉಸಿರನ್ನು ಬಿಡಬೇಕು. ನಿಧಾನವಾಗಿ ಉಸಿರಾಡಬೇಕಾಗುತ್ತದೆ. ಉಸಿರೆಳೆಯುವ ಹಾಗೂ ಉಸಿರು ಬಿಡುವ ಅವಧಿ ಒಂದೇ ಆಗಿರಬೇಕು.
ಭಸ್ತಿಕಾ ಆರೋಗ್ಯಕ್ಕೆ ಒಳ್ಳೆಯದು. ಧ್ಯಾನ ಮುದ್ರೆ ಅಥವಾ ವಾಯು ಮುದ್ರೆಯಲ್ಲಿ ಕುಳಿತುಕೊಂಡು ಭಸ್ತ್ರಿಕಾವನ್ನು ಅಭ್ಯಾಸ ಮಾಡಬೇಕು. ಇದು ಆಳವಾದ ಉಸಿರಾಟದ ವ್ಯಾಯಾಮವಾಗಿದೆ. ದಿನದಲ್ಲಿ ಐದು ನಿಮಿಷವಾದ್ರೂ ಇದನ್ನು ಮಾಡಬೇಕು. ಇದು ಉಸಿರಾಟ ವ್ಯವಸ್ಥೆಯನ್ನು ಬಲಪಡಿಸುತ್ತದೆ. ತಜ್ಞರ ಸಲಹೆ ಪಡೆದು ಈ ವ್ಯಾಯಾಮ ಮಾಡಬೇಕು.
ಕಪಾಲಭಾತಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಶ್ವಾಸಕೋಶದ ಸಮಸ್ಯೆ, ಹೊಟ್ಟೆ ಹುಣ್ಣು, ಹೃದಯ ಸಂಬಂಧಿ ಸಮಸ್ಯೆಯಿದ್ದರೆ ಅಥವಾ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆ ಕಪಾಲಭಾತಿ ಮಾಡಬಾರದು.
ಅನುಲೋಮ, ವಿಲೋಮ ಪ್ರಾಣಾಯಾಮ ಮಾಡುವುದು ಬಹಳ ಒಳ್ಳೆಯದು. ಇದನ್ನು ಸರಿಯಾಗಿ ಕಲಿತು ಮಾಡಬೇಕು. ಬದಲಾಗುತ್ತಿರುವ ವಾತಾವರಣದಲ್ಲಿ ಶ್ವಾಸಕೋಶವನ್ನು ಬಲಗೊಳಿಸುವುದು ಬಹಳ ಮುಖ್ಯ. ಈ ಋತುವಿನಲ್ಲಿ ಜನರು ಬೇಗ ಅನಾರೋಗ್ಯಕ್ಕೊಳಗಾಗ್ತಿದ್ದಾರೆ. ಪ್ರಾಣಾಯಾಮದಿಂದ ಸಾಕಷ್ಟು ಪ್ರಯೋಜನವಿದೆ. ತೂಕವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ. ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.