ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 1000 ರೂಪಾಯಿ ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಮಾಡುವ ವಿಷಯ ತಮಗೂ ಗೊತ್ತಿರಲಿಲ್ಲ ಎಂದು ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಆತ್ಮಚರಿತ್ರೆಯಲ್ಲಿ ಬರೆಯಲಾಗಿದೆ.
2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ದೊಡ್ಡಮೊತ್ತದ ನೋಟುಗಳನ್ನು ಅಮಾನ್ಯೀಕರಣಗೊಳಿಸುವ ಘೋಷಣೆ ಮಾಡಿದ್ದರು. ಅವರು ಘೋಷಣೆ ಮಾಡಿದ ನಂತರವೇ ನನಗೆ ಅದರ ಬಗ್ಗೆ ತಿಳಿಯಿತು. ಇಂತಹ ಮಹತ್ವದ ಕ್ರಮಗಳನ್ನು ಅಚ್ಚರಿಯ ಘೋಷಣೆ ಮಾಡುವುದು ಅಗತ್ಯ. ಮೊದಲೇ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಿದ್ದರೆ ನೋಟು ಅಮಾನ್ಯೀಕರಣಕ್ಕೆ ಮಹತ್ವ ಇರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ ದಿ ಪ್ರೆಸಿಡೆನ್ಸಿಯಲ್ ಇಯರ್ಸ್: 2012 -2017’ ಪುಸ್ತಕದಲ್ಲಿ ಈ ಕುರಿತಾಗಿ ಪ್ರಸ್ತಾಪಿಸಿರುವ ಪ್ರಣಬ್ ಮುಖರ್ಜಿ, ಮೋದಿಯ ಅಚ್ಚರಿಯ ನಿರ್ಧಾರ ನನಗೆ ಆಶ್ಚರ್ಯವನ್ನು ತರಲಿಲ್ಲ. ಅದು ಅಗತ್ಯವಾಗಿತ್ತು ಕೂಡ ಎಂದು ತಿಳಿಸಿದ್ದಾರೆ.
2015 ರ ಕ್ರಿಸ್ಮಸ್ ದಿನ ಪ್ರಧಾನಿ ನರೇಂದ್ರ ಮೋದಿ ಲಾಹೋರ್ ಗೆ ದಿಢೀರ್ ಭೇಟಿ ನೀಡಿ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಜನ್ಮದಿನದ ಶುಭಾಶಯ ಹೇಳುವ ಅಗತ್ಯವಿರಲಿಲ್ಲ ಎಂದು ಪ್ರಣಬ್ ತಿಳಿಸಿದ್ದಾರೆ. ಮೋದಿಯವರ ನಡೆ ಅನಗತ್ಯವಾಗಿತ್ತು. ಅವರಿಗೆ ವಿದೇಶಾಂಗ ನೀತಿಯ ಬಗ್ಗೆ ಅರಿವಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.