ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಇಂದು ನೆರವೇರಲಿದೆ.
ಪುಷ್ಪಗಳಿಂದ ರಾಮ ಮಂದಿರ ಅಲಂಕರಿಸಲಾಗಿದೆ. ಮಧ್ಯಾಹ್ನ 12 29 ರಿಂದ 12:30 ರವರೆಗೆ 32 ಸೆಕೆಂಡುಗಳಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಲಿದೆ. 150ಕ್ಕೂ ಹೆಚ್ಚು ಸಂಪ್ರದಾಯಗಳಂತೆ ಪೂಜೆ ನೆರವೇರಲಿದ್ದು, 7 ಸಾವಿರಕ್ಕೂ ಅಧಿಕ ವಿಶೇಷ ಅಹ್ವಾನಿತರು ಕಾರ್ಯಕ್ರಮದಲ್ಲಿ ಇರಲಿದ್ದಾರೆ.
32 ಸೆಕೆಂಡ್ ಶುಭ ಮಹೂರ್ತ ಇರಲಿದೆ. 12:29 ರಿಂದ 12:30ರ 32 ಸೆಕೆಂಡ್ ಗಳ ಶುಭಮುಹೂರ್ತದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ. ಕಾಶಿಯ ಪ್ರಸಿದ್ಧ ವೈದಿಕ ಆಚಾರ್ಯ ಗಣೇಶ್ ದ್ರಾವಿಡ್, ಆಚಾರ್ಯ ಲಕ್ಷ್ಮಿಕಾಂತ ದೀಕ್ಷಿತ್ ಅವರ ನಿರ್ದೇಶನದಲ್ಲಿ 121 ವೈದಿಕ ಆಚಾರ್ಯರು ಧಾರ್ಮಿಕ ಕಾರ್ಯ ನೆರವೇರಿಸಲಿದ್ದಾರೆ. ಈ ವೇಳೆ 150ಕ್ಕೂ ಹೆಚ್ಚು ಸಂಪ್ರದಾಯಗಳು ನೆರವೇರಲಿವೆ.
ಪ್ರಾಣ ಪ್ರತಿಷ್ಠಾಪನೆ ಶುಭ ಸಮಯ ಕೇವಲ 32 ಸೆಕೆಂಡ್ ಗಳು. ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಠೆ ಮುಖ್ಯ ಯಜಮಾನರಾಗಿ ಪ್ರತಿಷ್ಠಾಪನೆ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.