ಧಾರವಾಡ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ವ್ಯಕ್ತಿತ್ವ ರೂಪಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ದೇಶದ ಪ್ರಗತಿ ಮತ್ತಷ್ಟು ಹೆಚ್ಚಾಗುತ್ತದೆ. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರೆ ಭಾರತ ನಂಬರ್ ಒನ್ ದೇಶವಾಗುತ್ತದೆ ಎಂದರು.
ಹಿಂದೆ ಭಾರತದಲ್ಲಿ ವಿಶ್ವಕ್ಕೆ ವಿದ್ಯೆ ನೀಡುವ ಶ್ರೇಷ್ಠ ವಿಶ್ವವಿದ್ಯಾಲಯಗಳು ಇದ್ದವು. ಕಾಲಕ್ರಮೇಣ ಅವೆಲ್ಲ ಮಾಯವಾದವು. ಇವತ್ತು ಜಗತ್ತಿಗೆ ಸಹಾಯ ಮಾಡುವ ಮಟ್ಟಿಗೆ ಭಾರತ ಬೆಳೆದಿದೆ. ಇದು ಮೋದಿ ಸರ್ಕಾರದ ತಾಕತ್ತು ಎಂದು ಹೇಳಿದ್ದಾರೆ.