ಧಾರವಾಡ: ರಾಜ್ಯದಲ್ಲಿ ಮಳೆಗೆ ಅಪಾರ ಹಾನಿಯಾದ ಹಿನ್ನೆಲೆಯಲ್ಲಿ ನಾಳೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ರಾಜ್ಯದಲ್ಲಿ ಮಳೆಯಿಂದ ಆದ ಹಾನಿಯ ಸಮಗ್ರ ಮಾಹಿತಿಯನ್ನು ಗೃಹಸಚಿವರಿಗೆ ನೀಡುತ್ತೇನೆ. ಅನುದಾನದ ವಿಚಾರದಲ್ಲಿ ತಾರತಮ್ಯವಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಪ್ರಸ್ತಾಪಿಸುತ್ತೇನೆ. ಕಳೆದ ಬಾರಿಯೂ ರಾಜ್ಯಕ್ಕೆ ಪರಿಹಾರ ನೀಡಲಾಗಿದೆ. ಈ ವರ್ಷದ ಮಾಹಿತಿಯನ್ನು ಕೂಡ ಕೇಂದ್ರಕ್ಕೆ ನೀಡುತ್ತೇನೆ. ಸಮಗ್ರ ವರದಿ ನೀಡಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸುತ್ತೇನೆ ಎಂದು ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.