ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ʼಡ್ರಾಮಾ ಜೂನಿಯರ್ಸ್ʼ ಕಾರ್ಯಕ್ರಮದಲ್ಲಿ ಈ ವಾರದಂದು ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಆಗಮಿಸಲಿದ್ದಾರೆ. ಈ ಕುರಿತು ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದೆ.
ಹಿರಿಯ ನಟಿ ಲಕ್ಷ್ಮಿ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ತೀರ್ಪುಗಾರರಾಗಿರುವ ʼಡ್ರಾಮಾ ಜೂನಿಯರ್ಸ್ʼ ಕಾರ್ಯಕ್ರಮದಲ್ಲಿ ಈ ವಾರ ʼಡ್ರಾಮಾ ಜೂನಿಯರ್ಸ್ʼ ಮಕ್ಕಳ ಜೊತೆ ʼಕಾಮಿಡಿ ಕಿಲಾಡಿಗಳುʼ ಕೂಡ ಸೇರ್ಪಡೆಯಾಗಲಿದ್ದು, ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಪ್ರಕಾಶ್ ರಾಜ್ ಅಭಿನಯದ ‘ನಾಗಮಂಡಲ’ ಚಿತ್ರವನ್ನು ʼಡ್ರಾಮಾ ಜೂನಿಯರ್ಸ್ʼ ಮಕ್ಕಳು ತಮ್ಮ ಆಕ್ಟ್ ಮೂಲಕ ಮತ್ತೊಮ್ಮೆ ತೋರಿಸಲಿದ್ದಾರೆ.