ಹಾಸನ: ಸಂಸದ ಪ್ರಜ್ವರ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿಗೆ ಆದೇಶಿಸಿದ್ದು, ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ದಾಖಲಾಗಿದ್ದು, ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಸಂಕಷ್ಟ ಎದುರಾಗಿದೆ.
ಇಂದು ಹಾಸನಕ್ಕೆ ಭೇಟಿ ನೀಡಲಿರುವ ಎಸ್ ಐಟಿ ತಂಡ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಸಲಿದ್ದು, ರೇವಣ್ಣ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿ.ಕೆ.ಸಿಂಗ್, ಎಸ್ ಪಿ ಸೀಮಾ ಲಾಟ್ಕರ್, ಸುಮನ್ ಡಿ. ಪನ್ನೇಕರ್ ಹಾಗೂ ಇನ್ಸ್ ಪೆಕ್ಟರ್ ಗಳನ್ನು ಒಳಗೊಂಡ ಎಸ್ ಐಟಿ ತಂಡದಿಂದ ತನಿಖೆ ನಡೆಯಲಿದ್ದು, ಪ್ರಕರಣ ಸಂಬಂಧ ಅಧಿಕರಿಗಳು ದಾಖಲೆಗಳನ್ನು ಪಡೆದು ಸಂತ್ರಸ್ತೆಯರ ವಿಚಾರಣೆ ನಡೆಸುವ ಸಾಧ್ಯತೆ ಇದೆ.