ಬೆಂಗಳೂರು: ಎನ್ ಡಿ ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿಯವರೇ ನೀವು ಉಜ್ವಲ ಯೋಜನೆ ಕೊಡ್ತೀವಿ ಅಂತ ಹೇಳಿ ಪ್ರಜ್ವಲ ಯೋಜನೆ ಕೊಟ್ಟುಬಿಟ್ಟಿರಿ ಎಂದು ಕಾಂಗ್ರೆಸ್ ಕಟಕಿಯಾಡಿದೆ.
ಮಹಿಳೆಯರ ಘನತೆ, ಗೌರವವನ್ನು ಬೀದಿ ಪಾಲು ಮಾಡುವವನಿಗೆ ಮತ ಹಾಕುವುದರಿಂದ ನನಗೆ ಶಕ್ತಿ ಬರುತ್ತದೆ ಎಂದಿರುವ ಮೋದಿಯವರಿಂದ ಈ ದೇಶದ ಮಹಿಳೆಯರಿಗೆ ನ್ಯಾಯ ಸಿಗುತ್ತದೆಯೇ? ಇಂತವರ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವುದು ಮಣಿಪುರದಲ್ಲೇ ಸಾಬೀತಾಗಿದೆ, ಕರ್ನಾಟಕದಲ್ಲಿ ಮತ್ತೊಮ್ಮೆ ನಿರೂಪಿತವಾಗಿದೆ ಎಂದು ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಮಾಹಿತಿ ಇದ್ದರೂ ಸಹ ಒಬ್ಬ ಮಾಸ್ ರೇಪಿಸ್ಟ್ ಜೊತೆ ಪ್ರಧಾನಿ ನಿಂತು ಮತ ಕೇಳಿದ್ದು ಈ ದೇಶದ ಇತಿಹಾಸಕ್ಕೆ ಅಂಟಿದ ಮಹಾ ಕಳಂಕ ಎಂದು ಕಾಂಗ್ರೆಸ್ ಹಿಗ್ಗ ಮುಗ್ಗಾ ವಾಗ್ದಾಳಿ ನಡೆಸಿದೆ.
ಪ್ರಜ್ವಲ್ ರೇವಣ್ಣನಿಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ SIT ನೋಟಿಸ್ ನೀಡಿತ್ತು, ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಕರೆತರಲು SIT ತಂಡ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.
ಮಹಿಳೆಯರ ಮಾನಹರಣ ಮಾಡಿದ ಪ್ರಜ್ವಲ್ ರೇವಣ್ಣನ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.