ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಬಂಧನವಾದವರು ನನ್ನ ಪಿಎ ಅಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂ ಗೌಡ, ಯಾವುದೇ ಪೆನ್ ಡ್ರೈವ್, ವಿಡಿಯೋಗಳನ್ನು ಕಳಿಸುವುದು, ನೋಡುಡುವುದು ಅಪರಾಧ. ನಾನೇ ಕಾರ್ಯಕರ್ತರಿಗೆ ಎಚ್ಚರಿಕೆಯನ್ನೂ ನೀಡುತ್ತೇನೆ. ಹಾಗಾಗಿ ಇದಕ್ಕೂ ನಮಗೂ ಯಾವೂದೇ ಸಂಬಂಧವಿಲ್ಲ. ಹಾಸನದಲ್ಲಿಯೇ ಎರಡು ಲಕ್ಷ ಪೆನ್ ಡ್ರೈವ್ ಗಳಿವೆ ಎಂದು ಹೇಳುತ್ತಾರೆ ಹಾಗಾದರೆ ಎಸ್ಐಟಿ ಪ್ರತಿಯೊಬ್ಬರ ಮೊಬೈಲ್ ಗಳನ್ನು ಪರಿಶೀಲಿಸಲಿದೆಯೇ? ಎಸ್ ಐಟಿ ಇದೇ ಮಾನದಂಡದಲ್ಲಿ ತನಿಖೆ ನಡೆಸುವುದಾದರೆ ಜಿಲ್ಲೆಯಲ್ಲಿ 15 ಲಕ್ಷ ಮೊಬೈಲ್ ಬಳಕೆದಾರರೂ ತಪ್ಪಿತಸ್ಥರಾಗುತ್ತಾರೆ ಎಂದು ಹೇಳಿದರು.
ಏಪ್ರಿಲ್ 23ರಂದು ಲಾಯರ್ ಪೆನ್ ಡ್ರೈವ್ ತಂದುಕೊಟ್ಟಿದ್ದಾರೆ. ಹಾಗಂತ ಲಾಯರ್ ಮೇಲೆ ಕೇಸ್ ದಾಖಲಿಸಲು ಆಗುತ್ತಾ? ಏನೇ ಇರಲಿ. ಸಂತ್ರಸ್ತರ ವಿಡಿಯೋ ವೈರಲ್ ಮಾಡಿದ್ದು ತಪ್ಪು ಮಹಿಳೆಯರ ವಿಡಿಯೋವನ್ನು ಈ ರೀತಿ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.