
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪೆನ್ ಡ್ರೈವ್ ಹಂಚಿಕೆ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಆರೋಪಿಸಿದ್ದಾರೆ.
ಪೆನ್ ಡ್ರೈವ್ ಗಳನ್ನು ಚೆನ್ನೈ ಕಂಪನಿಯೊಂದರಲ್ಲಿ ಖರೀದಿಸಲಾಗಿದೆ. ಬಳಿಕ ಆಸ್ಟ್ರೇಲಿಯಾ ಹಾಗೂ ಮಲೇಷಿಯಾ ಲ್ಯಾಬ್ ನಲ್ಲಿ ಇದನ್ನು ತಯಾರಿಸಿ ಪೆನ್ ಡ್ರೈವ್ ಗಳಿಗೆ ಏನೇನು ಬೇಕ್ ಅವುಗಳನ್ನು ಕಾಪಿ ಮಾಡಿಸಿದ್ದಾರೆ. ಆನಂತರದಲ್ಲಿ ಪೆನ್ ಡ್ರೈವ್ ಗಳನ್ನು ಎಲ್ಲಾ ಕಡೆಯೂ ಹಂಚಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಈಗ ಕೇವಲ ರಾಜ್ಯ ಮಟ್ಟದಲ್ಲಿ ಮತ್ರ ಪ್ರಕರಣವಾಗಿ ಉಳಿದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿಯಾಗುತ್ತಿದೆ. ಎಸ್ ಐಟಿ ತನಿಖೆಯಿಂದ ಏನೂ ಮಾಡಲು ಆಗದು ದೇಶಬಿಟ್ಟು ಹೋಗಿ ಎಸ್ ಐಟಿ ತನಿಖೆ ನಡೆಸಲು ಆಗದು. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.