ಹಲವು ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದರೆನ್ನಲಾದ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಈ ಲೈಂಗಿಕ ದೌರ್ಜನ್ಯದ ವಿಡಿಯೋ ಒಳಗೊಂಡ ಪೆನ್ ಡ್ರೈವ್ ಬಹಿರಂಗವಾದ ಬಳಿಕ ಚುನಾವಣೆ ನಡೆದ ದಿನವೇ ವಿದೇಶಕ್ಕೆ ತೆರಳಿದ್ದರು.
ಲೈಂಗಿಕ ದೌರ್ಜನ್ಯದ ಪ್ರಕರಣ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ತಂಡ ರಚಿಸಿದ್ದು, ಓರ್ವ ಸಂತ್ರಸ್ತೆಯ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ ಹೆಚ್.ಡಿ. ರೇವಣ್ಣ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕಾಗಿ ಎಸ್ಐಟಿ ತಂಡ ಇಂಟರ್ಫೋಲ್ ನೆರವು ಪಡೆಯುತ್ತಿದ್ದು, ಇದರ ಮಧ್ಯೆ ಮೈಸೂರು – ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್, ಪ್ರಜ್ವಲ್ ರೇವಣ್ಣ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿರುವ ನಿತ್ಯಾನಂದ ಸ್ವಾಮಿಯ ಜೊತೆ ಪ್ರಜ್ವಲ್ ರೇವಣ್ಣ ಸಂಪರ್ಕದಲ್ಲಿದ್ದು, ಅಲ್ಲಿಗೆ ಹೋಗಲು ತಯಾರಿ ನಡೆಸಿರಬಹುದು. ವಾಪಸ್ ಬೆಂಗಳೂರಿಗೆ ಮರಳಲು ಫ್ಲೈಟ್ ಟಿಕೆಟ್ ಮಾಡಿಸಿದ್ದ ಪ್ರಜ್ವಲ್ ರೇವಣ್ಣ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.