alex Certify ಆಯಾ ಕ್ಷೇತ್ರದವರು ಆಯಾ ಕ್ಷೇತ್ರದಲ್ಲೇ ಸ್ಪರ್ಧಿಸಬೇಕೆಂಬ ಕಾನೂನು ತರಲಿ, ಕಾಂಗ್ರೆಸ್ ನಲ್ಲಿ ಯಾರು ಎಲ್ಲಿ ನಿಂತಿದ್ರು ಎಂದು ಮೊದಲು ಚರ್ಚೆಯಾಗಲಿ: ಸಂಸದ ಪ್ರಜ್ವಲ್ ರೇವಣ್ಣ ಸವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯಾ ಕ್ಷೇತ್ರದವರು ಆಯಾ ಕ್ಷೇತ್ರದಲ್ಲೇ ಸ್ಪರ್ಧಿಸಬೇಕೆಂಬ ಕಾನೂನು ತರಲಿ, ಕಾಂಗ್ರೆಸ್ ನಲ್ಲಿ ಯಾರು ಎಲ್ಲಿ ನಿಂತಿದ್ರು ಎಂದು ಮೊದಲು ಚರ್ಚೆಯಾಗಲಿ: ಸಂಸದ ಪ್ರಜ್ವಲ್ ರೇವಣ್ಣ ಸವಾಲ್

ಹಾಸನ: ಕುಮಾರಸ್ವಾಮಿ ರಾಮನಗರದವರಲ್ಲ, ಹೊಳೆನರಸೀಪುರದವರು ಎಂಬ ಹೇಳಿಕೆ ವಿಚಾರದ ಬಗ್ಗೆ ಹಾಸನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ನಮ್ಮ ಬಗ್ಗೆ ಮಾತನಾಡುವ ಬದಲು ಕಾಂಗ್ರೆಸ್ ನಲ್ಲಿ ಯಾರ್ಯಾರು ಎಲ್ಲೆಲ್ಲಿ ನಿಂತಿದ್ದರೂ ಎನ್ನುವುದನ್ನು ಮೊದಲು ಚರ್ಚಿಸಲಿ. ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಹೇಳಿದ್ದಾರೆ.

ದೇವೇಗೌಡರು ಹಾಸನದಿಂದ ಹೋಗಿ ದೆಹಲಿಯಲ್ಲಿ ಆಡಳಿತ ನಡೆಸಿದರು. ಅದನ್ನು ತಪ್ಪು ಎನ್ನುತ್ತಾರೆಯೇ? ಮೋದಿ ಗುಜರಾತ್ ನಿಂದ ಬಂದವರು, ವಾರಣಾಸಿಯಲ್ಲಿ ಸ್ಪರ್ಧಿಸಿಲ್ಲವೇ? ಪ್ರಜಾಪ್ರಭುತ್ವದಲ್ಲಿ ಎಲ್ಲಾದರೂ ಸ್ಪರ್ಧಿಸಿ ಗೆಲ್ಲಬಹುದು, ಸೋಲಬಹುದು. ಬೇಕಾದರೆ ಅವರಿಗೆ ಕಾನೂನು ಬದಲಾಯಿಸಲು ಹೇಳಿ ಎಂದು ಹೇಳಿದ್ದಾರೆ.

ಹೊಳೆನರಸೀಪುರದವರು ಹೊಳೆನರಸೀಪುರದಲ್ಲೇ, ಕನಕಪುರ ದವರು ಕನಕಪುರದಲ್ಲಿಯೇ, ರಾಮನಗರದವರು ರಾಮನಗರದಲ್ಲಿಯೇ ಸ್ಪರ್ಧಿಸಬೇಕು ಎಂದು ಕಾನೂನು ಮಾಡಲಿ. ಎಷ್ಟು ಜನ ಎಷ್ಟು ಕಡೆಯಿಂದ ವಲಸೆ ಬಂದು ಸ್ಪರ್ಧಿಸಿಲ್ಲ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಹಾಗಾದರೆ ಅವರು ಬಾದಾಮಿಯವರೇ ಎಂದು ಪ್ರಶ್ನಿಸಿದ ಪ್ರಜ್ವಲ್ ರೇವಣ್ಣ, ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಮನಗರ ಬೆಳೆಯಲಿ ಎಂದು ಜಿಲ್ಲೆ ಮಾಡಿದ್ದಾರೆ. ಈ ವಿಚಾರದಲ್ಲಿ ಕುಮಾರಸ್ವಾಮಿ ಬೆಂಬಲಕ್ಕೆ ನಾವಿದ್ದೇವೆ. ರಾಮನಗರ ಬೆಂಗಳೂರಿಗೆ ಸೇರಿಸಿದರೆ ಯಾವ ರೀತಿಯ ಮಾನ್ಯತೆ ಸಿಗುತ್ತದೆ? ಹೆಚ್.ಡಿ.ಕೆ. ಹೋರಾಟದ ತೀರ್ಮಾನ ಕೈಗೊಂಡರೆ ಅವರ ಪರ ನಿಲ್ಲುತ್ತೇವೆ. ಒಬ್ಬರ ಅನುಕೂಲಕ್ಕಾಗಿ ತೀರ್ಮಾನಿಸಿದರೆ ಖಂಡಿತ ವಿರೋಧಿಸುತ್ತೇವೆ. ಸಾರ್ವಜನಿಕರಿಗೆ ಅನುಕೂಲವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಯಾರಿಗೆ ಅನುಕೂಲ ಆಗುತ್ತೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ತಾನೇ ತಾನಾಗಿ ಎಲ್ಲಾ ಏನು ಅಂಥ ಆಚೆ ಬರುತ್ತದೆ. ಕುಮಾರಸ್ವಾಮಿಗೆ ಜಿಲ್ಲೆ ಉಳಿಸಿಕೊಳ್ಳಬೇಕೆಂಬ ಹಂಬಲ ಇದೆ. ಅವರಿಗೆ ರಾಮನಗರ ಜಿಲ್ಲೆಯ ಮೇಲೆ ಪ್ರೀತಿ ಅಭಿಮಾನ ಇದೆ. ನಮ್ಮ ಕುಟುಂಬಕ್ಕೆ ಆ ಜಿಲ್ಲೆಯ ಜನ ಆಶೀರ್ವದಿಸಿ ಅಧಿಕಾರ ಕೊಟ್ಟಿದ್ದಾರೆ. ಯಾವುದೇ ಸ್ವಾರ್ಥ ಇಲ್ಲದೆ ರಾಮನಗರ ಜಿಲ್ಲೆಗೆ ನಾವು ಸೇವೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ನನಗೇನು ಗೊತ್ತಿಲ್ಲ ಡಿಸಿಎಂ ಕೇಳಿ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಅವರಲ್ಲಿ ಮೊದಲು ತೀರ್ಮಾನ ಆಗಲಿ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ ಇರುವುದರಿಂದ ಮೊದಲು ತೀರ್ಮಾನ ಮಾಡಿಕೊಳ್ಳಲಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...