
ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಬೇಡಿಕೆಯಲ್ಲಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಮುಂಬರುವ ಸಿನಿಮಾದ ಟೈಟಲ್ ಇಂದು ರಿವಿಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಕರಾವಳಿ’ ಎಂಬ ಶೀರ್ಷಿಕೆ ಇಟ್ಟಿದ್ದು, ಪ್ರಜ್ವಲ್ ದೇವರಾಜ್ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಗುರುದತ್ತ ಗಾಣಿಗ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಕರಾವಳಿಯ ಸೊಗಡನ್ನು ತೋರಿಸಲು ಹೊರಟಿದ್ದಾರೆ. ಕಾಂತರಾ ಸಿನಿಮಾದಂತೆ ಯಶಸ್ಸು ಸಿಗಲಿ ಎಂದು ಸಿನಿ ಪ್ರೇಕ್ಷಕರು ಹಾರೈಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಸಜ್ಜಾಗಿದೆ.
