ಬೆಂಗಳೂರು: ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ವಿಡಿಯೋದಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರು ಇರುವುದನ್ನು ಪತ್ತೆ ಮಾಡಿದ ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯರಿಗೆ ದೂರು ನೀಡಲು ಸೂಚನೆ ನೀಡಿದ್ದಾರೆ. ಇವರು ದೂರು ನೀಡಿದಲ್ಲಿ ಪ್ರಜ್ವಲ್ ಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.
ಲೈಂಗಿಕ ದೌರ್ಜನ್ಯದ ವಿಡಿಯೋಗಳು ಮತ್ತು ಅಶ್ಲೀಲ ಫೋಟೋಗಳ ಪರಿಶೀಲನೆಯ ಸಂದರ್ಭದಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರ ಗುರುತು ಪತ್ತೆಯಾಗಿದೆ. ಇವರನ್ನು ಸಂಪರ್ಕಿಸಿದ ಎಸ್ಐಟಿ ಅಧಿಕಾರಿಗಳು ದೂರು ನೀಡಲು ಸೂಚಿಸಿದ್ದಾರೆ. ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳಲ್ಲಿರುವ ಮಹಿಳೆಯರನ್ನು ಗುರುತಿಸಿ ದೂರು ನೀಡುವಂತೆ ಮನವೊಲಿಸುವ ಕಾರ್ಯದಲ್ಲಿ ಎಸ್ಐಟಿ ತೊಡಗಿದೆ.
ಮರ್ಯಾದೆಗೆ ಅಂಜಿ ಕೆಲವು ಮಹಿಳೆಯರು ದೂರು ನೀಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಅವರ ಮನವೊಲಿಸಲು ಎಸ್ಐಟಿ ಮುಂದಾಗಿದೆ.