ಕೇಂದ್ರ ಸರ್ಕಾರ ಜನರಿಗೆ ನೆರವಾಗಲು ಅನೇಕ ಯೋಜನೆಗಳನ್ನು ಶುರು ಮಾಡಿದೆ. ಇದ್ರಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಒಂದು. ಪ್ರತಿ ತಿಂಗಳು ಕೇವಲ ಒಂದು ರೂಪಾಯಿ ಅಥವಾ ವರ್ಷದಲ್ಲಿ ಕೇವಲ 12 ರೂಪಾಯಿಗಳನ್ನು ಠೇವಣಿ ಇರಿಸುವ ಮೂಲಕ 2 ಲಕ್ಷ ರೂಪಾಯಿ ಆಕಸ್ಮಿಕ ವಿಮೆ ಪಡೆಯಬಹುದು.
ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ, ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಪ್ರಾರಂಭಿಸಿತ್ತು. ಪಿಎಂಎಸ್‌ಬಿವೈ ವಾರ್ಷಿಕ ಪ್ರೀಮಿಯಂ ಕೇವಲ 12 ರೂಪಾಯಿ. ಮೇ ತಿಂಗಳ ಕೊನೆಯಲ್ಲಿ ಇದರ ಪ್ರೀಮಿಯಂ ಠೇವಣಿ ಇಡಲಾಗುತ್ತದೆ. ಈ ಮೊತ್ತವನ್ನು ಮೇ 31 ರಂದು ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಪಿಎಂಎಸ್ ಬಿವೈ ಖಾತೆ ಹೊಂದಿದ್ದರೆ ಮೇ ತಿಂಗಳಿನಲ್ಲಿ ಖಾತೆಯನ್ನು ಖಾಲಿ ಇಡಬೇಡಿ ಎಂದು ಸಲಹೆ ನೀಡಲಾಗುತ್ತದೆ.
ಪಿಎಂಎಸ್‌ಬಿವೈ ಯೋಜನೆ ಲಾಭ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದರ ಲಾಭ ಪಡೆಯಲು ಅರ್ಜಿದಾರನ ವಯಸ್ಸು 18-70 ವರ್ಷದೊಳಗಿರಬೇಕು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ 12 ರೂಪಾಯಿ. ತಿಂಗಳಿಗೆ ಕೇವಲ 1 ರೂಪಾಯಿ. ಪಿಎಂಎಸ್‌ಬಿವೈ ಪಾಲಿಸಿಯ ಪ್ರೀಮಿಯಂ ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಬಹುದು. ಮನೆಯಲ್ಲೇ ಇದ್ರ ಲಾಭ ಪಡೆಯಲು ವಿಮಾ ಏಜೆಂಟರ್ ಸಹಾಯ ಪಡೆಯಬಹುದು.