ಧಾರವಾಡ : ಕರ್ನಾಟಕ ಸರ್ಕಾರವು 2023-24 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯ ಎಂಟು ತಾಲೂಕಿನ ಎಲ್ಲಾ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದೆ ಎಂದು ಕೃಷಿ ಇಲಾಖೆಯ ಜಂಟಿನಿರ್ದೇಶಕ ಡಾ. ಕಿರಣಕುಮಾರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ತಮ್ಮ ಹೆಸರು ನೊಂದಾಯಿಸಿಕೊಂಡು, ಭಾಗವಹಿಸಲು ಹಿಂಗಾರು ಹಂಗಾಮಿಗೆ ಗ್ರಾಮ ಪಂಚಾಯತಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳಾದ ಕಡಲೆ (ಮಳೆ ಆಶ್ರಿತ) ಮತ್ತು ಜೋಳ (ಮಳೆ ಆಶ್ರಿತ) ಬೆಳೆಗಳಿಗೆ ಡಿಸೆಂಬರ್ 01, 2023 ಕೊನೆಯ ದಿನವಾಗಿದೆ. ಮತ್ತು ಹೋಬಳಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳಾದ ಹುರುಳಿ (ಮಳೆ ಆಶ್ರಿತ), ಕುಸುಮೆ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ನವೆಂಬರ್ 15, 2023, ಕಡಲೆ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಜೋಳ (ನೀರಾವರಿ), ಮುಸುಕಿನ ಜೋಳ (ನೀರಾವರಿ), ಹಾಗೂ ಗೋಧಿ (ಮಳೆ ಆಶ್ರಿತ) ಬೆಳೆಗಳಿಗೆ ಡಿಸೆಂಬರ್ 01, 2023 ಕೊನೆಯ ದಿನವಾಗಿದೆ.
ಗೋಧಿ (ನೀರಾವರಿ) ಬೆಳೆಗೆ ಡಿಸೆಂಬರ್ 15, 2023 ಮತ್ತು ಕಡಲೆ (ನೀರಾವರಿ) ಬೆಳೆಗೆ ಡಿಸೆಂಬರ್ 30, 2023 ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿಗೆ ಹೋಬಳಿ ಮಟ್ಟಕ್ಕೆ ಅಧಿಸೂಚಿತವಾದ ನೆಲಗಡಲೆ (ಶೇಂಗಾ) ನೀರಾವರಿ ಬೆಳೆಗೆ ವಿಮೆ ನೊಂದಾಯಿಸಲು ಫೆಬ್ರವರಿ 28, 2024 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗಾಗಿ ಎಸ್‍ಬಿಐ ಜನರಲ್ ಇನಶೂರೆನ್ಸ್ ಕಂಪನಿ, 2ನೇ ಮಹಡಿ, ಕಲಬುರ್ಗಿ ಹಾಲ್‍ಮಾರ್ಕ, ಪಿಂಟೋ ರೋಡ್, ದೇಸಾಯಿ ಕ್ರಾಸ್ ದೇಶಪಾಂಡೆ ನಗರ, ಹುಬ್ಬಳಿ ಇವರಿಗೆ ಅಥವಾ ಜಿಲ್ಲಾ ವ್ಯವಸ್ಥಾಪಕ ಉಮೇಶ್ ಕಾಂತಿ ಮೊ:9980987740 ಅಥವಾ ಸಮೀಪದ ಉಪ ಕೃಷಿನಿರ್ದೇಶಕರ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕ್ ಶಾಖೆಯವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಆಸಕ್ತ ರೈತರು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕೆಂದು ಜಂಟಿ ನಿರ್ದೇಶಕ ಡಾ. ಕಿರಣ ಕುಮಾರ ಅವರು ತಿಳಿಸಿದ್ದಾರೆ.