alex Certify ಮಕ್ಕಳ ತೂಕ ಹೆಚ್ಚಳವನ್ನು ನಿಯಂತ್ರಿಸಲು ಅಭ್ಯಾಸ ಮಾಡಿಸಿ ಈ ಯೋಗಾಸನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ತೂಕ ಹೆಚ್ಚಳವನ್ನು ನಿಯಂತ್ರಿಸಲು ಅಭ್ಯಾಸ ಮಾಡಿಸಿ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಕೊರೊನಾ ಕಾರಣದಿಂದ ಮಕ್ಕಳಿಗೆ ಶಾಲೆಗಳು ಇರದ ಕಾರಣ ಮನೆಯಲ್ಲಿದ್ದು ಅತಿಯಾಗಿ ತಿಂದು ಬೊಜ್ಜು ಬೆಳೆಸಿಕೊಂಡು ತೂಕ ಹೆಚ್ಚಳ ಮಾಡಿಕೊಂಡಿರುತ್ತಾರೆ. ಆದರೆ ಮಕ್ಕಳು ತಿನ್ನುವುದನ್ನು ಕಡಿಮೆ ಮಾಡಲು ಆಗುವುದಿಲ್ಲ. ಹಾಗಾಗಿ ಮಕ್ಕಳ ತೂಕ ಹೆಚ್ಚಳ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ.

*ಉತ್ಕಟಾಸನ (ಕುರ್ಚಿ ಭಂಗಿ) : ಇದು ತೊಡೆ ಮತ್ತು ಪುಷ್ಠದ ಟೋನ್ ಗಳನ್ನು ಬಲಪಡಿಸುತ್ತದೆ. ನಿಮ್ಮ ಚಾಪೆಯ ಮೇಲೆ ನಿಂತುಕೊಂಡು ಅಂಗೈಗಳನ್ನು ಒಂದಕ್ಕೊಂದು ಜೋಡಿಸಿ (ನಮಸ್ತೆ). ಬಳಿಕ ಕೈಗಳನ್ನು ತಲೆಯಿಂದ ಮೇಲಕ್ಕೆತ್ತಿ ನಿಮ್ಮ ಮೊಣಕಾಲನ್ನು ಬಾಗಿಸಿ ತೋಡೆಗಳನ್ನು ನೆಲಕ್ಕೆ ಸಮಾನಾಂತರವಾಗಿರಬೇಕು.

*ವೃಕ್ಷಾಸನ (ಮರದ ಭಂಗಿ) : ಈ ಆಸನವು ಹೊಟ್ಟೆಯ ಸ್ನಾಯುಗಳಿಗೆ ತುಂಬಾ ಒಳ್ಳೆಯದು. ನಿಮ್ಮ ಕಾಲುಗಳನ್ನು ಒಟ್ಟಿಗೆ ನಿಲ್ಲಿಸಿ. ಒಂದು ಕಾಲನ್ನು ಮೇಲಕ್ಕೆತ್ತಿ ಇನ್ನೊಂದು ಕಾಲಿನ ತೊಡೆಯ ಮೇಲೆ ಇಡಿ. ನಿಮ್ಮ ಕೈಗಳನ್ನು ಒಂದಕ್ಕೊಂದು ಜೋಡಿಸಿ ತಲೆಯಿಂದ ಮೇಲಕ್ಕೆತ್ತಿ ಸಮತೋಲನವನ್ನು ಕಾಪಾಡಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...