
ಕೆಲಸದ ಒತ್ತಡ, ಸರಿಯಾಗಿ ನಿದ್ರೆ ಮಾಡದಿದ್ದಾಗ ತಲೆನೋವಿನ ಸಮಸ್ಯೆ ಕಾಡುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ. ಈ ತಲೆನೋವನ್ನು ಔಷಧಗಳನ್ನು ಸೇವಿಸುವ ಬದಲು ಈ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ತಲೆನೋವು ತಕ್ಷಣ ನಿವಾರಣೆಯಾಗುತ್ತದೆ.
*ಶಿಶುಆಸನ: ಇದು ತಲೆನೋವಿಗೆ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ನೆಲದ ಮೇಲೆ ಮಂಡಿಯೂರಿ ನಂತರ ಮುಂದಕ್ಕೆ ಭಾಗಿ ಹಣೆಯನ್ನು ನೆಲಕ್ಕೆ ಸ್ಪರ್ಶಿಸಿ ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ. ಈ ಸ್ಥಾನದಲ್ಲೇ ಒಂದೆರಡು ನಿಮಿಷಗಳ ಕಾಲ ಇರಿ.
*ಹಸ್ತಪದಾಸನ : ಇದು ನಿಮ್ಮ ನರಮಂಡಲವನ್ನು ರಿಫ್ರೆಶ್ ಮಾಡಲು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಮನಸ್ಸು ಶಾಂತಗೊಳ್ಳುತ್ತದೆ. ನಿಮ್ಮ ಪಾದಗಳನ್ನು ಒಟ್ಟಿಗೆ ನಿಲ್ಲಿಸಿ ನಿಮ್ಮ ಕೈಗಳನ್ನು ನೇರವಾಗಿ ಕೆಳಗೆ ಇಟ್ಟು ನಿಂತುಕೊಳ್ಳಿ. ಉಸಿರಾಡಿ, ಬಳಿಕ ಕೈಗಳನ್ನು ತಲೆಯ ಮೇಲಕ್ಕೆತ್ತಿ ಸೊಂಟವನ್ನು ಬಗ್ಗಿಸಿ ಕೈಗಳನ್ನು ಕಾಲುಗಳ ಕಡೆಗೆ ತಂದು ನೆಲವನ್ನು ಸ್ಪರ್ಶಿಸಿ. ಈ ಸ್ಥಾನದಲ್ಲೇ ½ ಗಂಟೆ ಇರಿ.
*ಉಸ್ತ್ರಾಸನ : ಇದು ತಲೆನೋವನ್ನು ನಿವಾರಿಸುವುದು ಮಾತ್ರವಲ್ಲ ಬೆನ್ನು ನೋವನ್ನು ನಿವಾರಿಸುತ್ತದೆ. ಚಾಪೆಯ ಮೇಲೆ ಮಂಡಿಯೂರಿ ಕೈಗಳನ್ನು ಸೊಂಟದ ಮೇಲೆ ಇರಿಸಿ. ನಿಮ್ಮ ಮೊಣಕಾಲು ಮತ್ತು ಭುಜ ಒಂದೇ ಸಾಲಿನಲ್ಲಿರಬೇಕು. ಬಳಿಕ ನಿಮ್ಮ ಬೆನ್ನನ್ನು ಹಿಂದಕ್ಕೆ ಬಗ್ಗಿಸಿ ಕೈಗಳನ್ನು ಕಾಲುಗಳ ಮೇಲೆ ಇಡಿ. ತೋಳುಗಳನ್ನು ನೇರವಾಗಿ ಇರಿಸಿ. ನಿಮ್ಮ ಕುತ್ತಿಗೆಯನ್ನು ತಟಸ್ಥವಾಗಿಸಿ. ತಗ್ಗಿಸಬೇಕು. ಹೀಗೆ 30 ಸೆಕೆಂಡುಗಳ ಕಾಲ ಇರಿ.