ಮೂತ್ರಪಿಂಡ ರಕ್ತದಲ್ಲಿರುವ ವಿಷವನ್ನು ಹೊರ ಹಾಕುತ್ತದೆ. ರಕ್ತದೊತ್ತಡವನ್ನು, ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಮೂತ್ರಪಿಂಡವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ.
*ಅರ್ಧಾಮತ್ಸೇಂದ್ರಾಸನ : ಈ ಭಂಗಿಯು ಮೂತ್ರಪಿಂಡ ಮತ್ತು ಲಿವರ್ ಅನ್ನು ಉತ್ತೇಜಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ನಿಮ್ಮ ಕಾಲುಗಳನ್ನು ಚಾಚಿಕೊಂಡು ನೆಲದ ಮೇಲೆ ಕುಳಿತುಕೊಳ್ಳಿ. ನಿಮ್ಮ ಪಾದಗಳು ಒಟ್ಟಿಗೆ ಇರಬೇಕು. ಮತ್ತು ಬೆನ್ನು ಮೂಳೆ ನೆಟ್ಟಗೆ ಇರಬೇಕು. ನಿಮ್ಮ ಎಡಗಾಲನ್ನು ಬಗ್ಗಿಸಿ ಎಡಪಾದದ ಹಿಮ್ಮಡಿಯನ್ನು ಬಲ ಸೊಂಟದ ಪಕ್ಕದಲ್ಲಿಡಿ. ಬಲಗೈಯನ್ನು ಮೊಣಕಾಲಿನ ಮೇಲೆ ಇಟ್ಟು ನಿಮ್ಮ ಸೊಂಟ , ಕುತ್ತಿಗೆ ಮತ್ತು ಭುಜಗಳನ್ನು ಬಲಕ್ಕೆ ತಿರುಗಿಸಿ. ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿ.
*ಭುಜಂಗಾಸನ : ಈ ಭಂಗಿಯು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇಡಿ.