
ನಟ-ನೃತ್ಯ ನಿರ್ದೇಶಕ ಪ್ರಭುದೇವ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಮುಂಬೈನಲ್ಲಿ ಅವರ ಎರಡನೇ ಪತ್ನಿ ಹಿಮಾನಿ ಸಿಂಗ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗ್ಲೇ ಮೂರು ಗಂಡು ಮಕ್ಕಳ ತಂದೆಯಾಗಿರುವ ಪ್ರಭುದೇವ ಹೆಣ್ಣು ಮಗುವಿನ ತಂದೆಯಾದ ಸಂಭ್ರಮದಲ್ಲಿದ್ದಾರೆ.
ಇಡೀ ಕುಟುಂಬದಲ್ಲಿ ಇದು ಮೊದಲ ಹೆಣ್ಣು ಮಗುವಾಗಿದ್ದು ಕುಟುಂಬದಲ್ಲಿ ಸಂತೋಷ ಹೆಚ್ಚಾಗಿದೆ. ತೊಂಬತ್ತರ ದಶಕದಲ್ಲಿ ಅಭಿಮಾನಿಗಳಿಂದ ಭಾರತದ ಮೈಕೆಲ್ ಜಾಕ್ಸನ್ ಎಂದು ಬಿರುದು ಪಡೆದ ಪ್ರಭುದೇವ ಅವರು ತಮ್ಮ ತಂದೆ ಸುಂದರಂ ಮತ್ತು ಸಹೋದರ ರಾಜು ಸುಂದರಂ ಅವರೊಂದಿಗೆ ತಮ್ಮ ನವೀನ ನೃತ್ಯ ಸಂಯೋಜನೆಯ ಮೂಲಕ ಇಡೀ ಭಾರತೀಯ ಚಲನಚಿತ್ರೋದ್ಯಮವನ್ನು ಆಳಿದರು.
ಪ್ರಭುದೇವ ರಮಲತ್‌ನನ್ನು ಪ್ರೀತಿಸಿ 1995 ರಲ್ಲಿ ವಿವಾಹವಾದರು. ದಂಪತಿಗೆ ಮೂವರು ಗಂಡು ಮಕ್ಕಳಿದ್ದರು. ಅವರಲ್ಲಿ ಓರ್ವ ಪುತ್ರ ವಿಶಾಲ್ ದೇವ 2008 ರಲ್ಲಿ ನಿಧನರಾದರು. 2011ರಲ್ಲಿ ಪ್ರಭುದೇವ ಮತ್ತು ರಮಲತ್ ವಿಚ್ಛೇದನ ಪಡೆದರು.
ನಂತರ ಪ್ರಭುದೇವ ಮುಂಬೈ ಫಿಸಿಯೋಥೆರಪಿಸ್ಟ್ ಹಿಮಾನಿ ಸಿಂಗ್ ಅವರೊಂದಿಗೆ ಮತ್ತೆ ಪ್ರೀತಿಯನ್ನು ಕಂಡುಕೊಂಡು ಮೂರು ವರ್ಷಗಳ ಹಿಂದೆ ಮದುವೆಯಾದರು. ಹಿಮಾನಿ ಈಗ ತಮ್ಮ ಮೊದಲ ಮಗಳಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
