ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಪ್ರಸ್ತುತ ದೇಶದಲ್ಲಿ ಅತ್ಯಂತ ಜನಪ್ರಿಯ ದೀರ್ಘಕಾಲೀನ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.
ಸ್ಥಿರವಾದ ಆಕರ್ಷಕ ರಿಟರ್ನ್ಸ್ ನೀಡುವ ಸುರಕ್ಷಿತ ಆಯ್ಕೆ ಹುಡುಕುತ್ತಿರುವ ಭಾರತೀಯ ನಾಗರಿಕರಲ್ಲಿ ಇದು ಅತ್ಯಂತ ಜನಪ್ರಿಯ ಉಳಿತಾಯ ಮಾರ್ಗವೆನಿಸಿದೆ.
ಹೂಡಿಕೆದಾರರು ನಿಯಮಿತವಾಗಿ ಮತ್ತು ಶಿಸ್ತಿನಲ್ಲಿ ಹೂಡಿಕೆ ಮಾಡಿದರೆ ಒಂದೆರಡು ವರ್ಷಗಳಲ್ಲಿ ಪಿಪಿಎಫ್ ಮೂಲಕ ಗಣನೀಯ ಪ್ರಮಾಣದ ರಿಟರ್ನ್ಸ್ ಸಂಗ್ರಹಿಸಬಹುದಾಗಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಿವೃತ್ತಿಯ ನಂತರ ಹೂಡಿಕೆದಾರರಿಗೆ ದೀರ್ಘಾವಧಿಯ ನೆರವು ಒದಗಿಸಲು ವಿನ್ಯಾಸಗೊಳಿಸಲಾದ ಸರ್ಕಾರಿ ಬೆಂಬಲಿತ ಹೆಚ್ಚಿನ ರಿಟರ್ನ್ ನೀಡುವ ಸಣ್ಣ-ಉಳಿತಾಯ ಯೋಜನೆಯಾಗಿದೆ. ಹಾಗೆಯೇ ತೆರಿಗೆ ಮುಕ್ತ ಹೂಡಿಕೆಗೆ ಮಾರ್ಗವಾಗಿದೆ.
ಪಿಪಿಎಫ್ ಬಡ್ಡಿದರಗಳು ಪ್ರಸ್ತುತ 7.1% ಆಗಿದ್ದು, ಇದು ಬ್ಯಾಂಕ್ ಎಫ್‌ಡಿ ಬಡ್ಡಿ ದರಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಹೂಡಿಕೆ, ಬಡ್ಡಿ ಮತ್ತು ಕಾರ್ಪಸ್ ಎಲ್ಲವೂ ತೆರಿಗೆ ಮುಕ್ತವಾಗಿರುವ ಮಾರ್ಗಗಳಲ್ಲಿ ಪಿಪಿಎಫ್ ಕೂಡ ಒಂದಾಗಿದೆ.
7ನೇ ವೇತನ ಆಯೋಗ; ತಿಂಗಳ ಡಿಎ ಬಾಕಿ ಶೀಘ್ರದಲ್ಲೇ ಬಿಡುಗಡೆ…..?
ಮಾರ್ಗಸೂಚಿಗಳ ಪ್ರಕಾರ ಹೂಡಿಕೆದಾರರು ತಮ್ಮ ಪಿಪಿಎಫ್ ಖಾತೆಯಲ್ಲಿ ಸತತವಾಗಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. 15 ವರ್ಷ ಪೂರ್ಣಗೊಂಡ ಹಣದ ಅಗತ್ಯವಿಲ್ಲದಿದ್ದರೆ ಪಿಪಿಎಫ್ ಖಾತೆಯನ್ನು ಐದು ವರ್ಷಗಳಂತೆ ಇನ್ನಷ್ಟು ವರ್ಷಗಳವರೆಗೆ ವಿಸ್ತರಿಸಬಹುದು.
ಪ್ರತಿದಿನ ನಿಮ್ಮ ಪಿಪಿಎಫ್ ಖಾತೆಯಲ್ಲಿ ರೂ.33 ಅನ್ನು ಹಾಕಿದರೆ, ನಿಮ್ಮ ಮಾಸಿಕ ಹೂಡಿಕೆಯು ಸರಿಸುಮಾರು ರೂ 1,000 ಆಗಿರುತ್ತದೆ. ಪ್ರತಿ ವರ್ಷ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ನೀವು ರೂ 12,000 ಅಥವಾ ನಿಖರವಾಗಿ ರೂ 11,988 ಕ್ಕಿಂತ ಸ್ವಲ್ಪ ಕಡಿಮೆ ಹೂಡಿಕೆ ಮಾಡುತ್ತೀರಿ. ಇದನ್ನು 25 ವರ್ಷದಿಂದ 60 ವರ್ಷ ವಯಸ್ಸಿನವರೆಗೆ ಅಥವಾ 35 ವರ್ಷಗಳವರೆಗೆ ಮಾಡುವುದನ್ನು ಮುಂದುವರಿಸಿದರೆ, ಅವಧಿ ಮುಕ್ತಾಯದ ಸಮಯದಲ್ಲಿ ಪಡೆಯುವ ಮೊತ್ತವು 18.14 ಲಕ್ಷ ರೂ. ಆಗಿರುತ್ತದೆ. ಈ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
25 ವರ್ಷಗಳ ಅವಧಿಯಲ್ಲಿ ಠೇವಣಿ ಇಟ್ಟಿರುವ ಒಟ್ಟು ಹಣ 4.19 ಲಕ್ಷ ರೂ. ಆಗಿರುತ್ತದೆ, ಒಟ್ಟು ಬಡ್ಡಿಯು ಸುಮಾರು 14 ಲಕ್ಷದಷ್ಟಾಗಿರುತ್ತದೆ.
ಅಂತಹ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಭವಿಷ್ಯ ನಿಧಿಯ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ 500 ರೂ.ಗಳಷ್ಟು ಕಡಿಮೆ ಹೂಡಿಕೆ ಮಾಡಬಹುದು. ಪಿಪಿಎಫ್ ಖಾತೆಗಳನ್ನು ಆನ್‌ಲೈನ್‌ನಲ್ಲಿ ಅಥವಾ ಅವರ ಸ್ಥಳೀಯ ಬ್ಯಾಂಕ್‌ಗೆ ಭೇಟಿ ನೀಡಿ ತೆರೆಯಬಹುದು.