ಬಹುತೇಕ ಉದ್ಯೋಗಿಗಳೆಲ್ಲ ಪಿಎಫ್ ಖಾತೆಯನ್ನು ಹೊಂದಿರುತ್ತಾರೆ. ಇದು ಕೇಂದ್ರ ಸರ್ಕಾರದ ಯೋಜನೆ. ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ಪ್ರಯೋಜನಗಳೂ ಸಿಗುತ್ತದೆ. ಸರ್ಕಾರ ಕಾಲಕಾಲಕ್ಕೆ ಕೆಲವು ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರ ಪಿಎಫ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ಸಣ್ಣ ಮೊತ್ತದಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು
ಕಡಿಮೆ ಹಣವಿದ್ದರೂ ಸರ್ಕಾರದ ಉಳಿತಾಯ ಯೋಜನೆಗಳ ಲಾಭವನ್ನು ಪಡೆಯಬಹುದು. ಈ ಯೋಜನೆಗಳಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಇವುಗಳಲ್ಲಿ ನೀವು 1.50 ಲಕ್ಷದವರೆಗೆ ಹಣವನ್ನು ಠೇವಣಿ ಮಾಡಬಹುದು. ಸರ್ಕಾರವು PPFನ ಬಡ್ಡಿ ದರವನ್ನು ಶೇ.7.10ಕ್ಕೆ ಇಳಿಸಿದೆ.
ತಿಂಗಳಿಗೊಮ್ಮೆ ಹಣ ಠೇವಣಿ
ಕನಿಷ್ಟ 1 ವರ್ಷದಲ್ಲಿ 500 ರೂಪಾಯಿಗಳವರೆಗೆ PPF ನಲ್ಲಿ ಹೂಡಿಕೆ ಮಾಡಬಹುದು. 1 ವರ್ಷದಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಿದರೆ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತೀರಿ. ಬಯಸಿದರೆ ಪ್ರತಿ ತಿಂಗಳು ಹಣವನ್ನು ಅದರಲ್ಲಿ ಜಮಾ ಮಾಡಲು ಅವಕಾಶವಿದೆ.
15 ವರ್ಷಗಳ ನಂತರವೂ ಖಾತೆಯನ್ನು ಮುಚ್ಚಲಾಗುವುದಿಲ್ಲ
15 ವರ್ಷಗಳ ನಂತರ ಅದರಲ್ಲಿ ಪಿಎಫ್ ಖಾತೆಯಲ್ಲಿ ಹೂಡಿಕೆ ನಿಲ್ಲುತ್ತದೆ. ಆದರೆ ಇದರಲ್ಲಿ ಹೆಚ್ಚು ಹೂಡಿಕೆ ಮಾಡಲು ಬಯಸಿದರೆ 15 ವರ್ಷಗಳ ನಂತರವೂ ಈ ಯೋಜನೆಯಲ್ಲಿ ಹಣ ಹಾಕಬಹುದು. ಆದರೆ ನಂತರ ನೀವು 1 ವರ್ಷಕ್ಕೆ ಒಮ್ಮೆ ಮಾತ್ರ ಹಣವನ್ನು ಹಿಂಪಡೆಯಬಹುದು.
ಖಾತೆ ತೆರೆಯುವುದು ಹೇಗೆ?
PPF ಖಾತೆಯನ್ನು ತೆರೆಯಲು ಫಾರ್ಮ್-1 ಅನ್ನು ಸಲ್ಲಿಸಬೇಕು. 15 ವರ್ಷಗಳ ನಂತರವೂ ಹೂಡಿಕೆ ಮಾಡಲು ಬಯಸಿದರೆ ಫಾರ್ಮ್-4 ರಲ್ಲಿ ಅರ್ಜಿ ಸಲ್ಲಿಸಬೇಕು.
PPF ಖಾತೆಯಲ್ಲಿ ಸಾಲ ತೆಗೆದುಕೊಳ್ಳುವುದು ಹೇಗೆ?
PPF ಖಾತೆಯಲ್ಲಿ ಸುಲಭವಾಗಿ ಸಾಲ ಪಡೆಯಬಹುದು. PPF ಖಾತೆಯಲ್ಲಿರುವ ಹಣದಲ್ಲಿ ಕೇವಲ 25 ಪ್ರತಿಶತವನ್ನು ಮಾತ್ರ ಸಾಲವಾಗಿ ನೀಡಲಾಗುತ್ತದೆ.