ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಶಕ್ತಿಶಾಲಿ ಬೈಕ್‌ಗಳು ಬಿಡುಗಡೆಯಾಗಿವೆ. ರಾಯಲ್ ಎನ್‌ಫೀಲ್ಡ್, ಬಜಾಜ್ ಆಟೋ, ಟಿವಿಎಸ್ ಮತ್ತು ಹಾರ್ಲೆ-ಡೇವಿಡ್‌ಸನ್ ಕಂಪನಿಯ ಮೋಟಾರ್‌ಸೈಕಲ್‌ಗಳು ಇವುಗಳಲ್ಲಿ ಪ್ರಮುಖವಾದವು. ಈ ಬೈಕ್‌ಗಳ ಬೆಲೆ ಮತ್ತು ವಿಶಿಷ್ಟ ಫೀಚರ್‌ಗಳನ್ನು ನೋಡೋಣ.
ರಾಯಲ್ ಎನ್‌ಫೀಲ್ಡ್ ಹಂಟರ್ 350 – ಇದು ಡಿಜಿ ಎನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕ್ 8 ಬಣ್ಣಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 1.50 ಲಕ್ಷ ರೂಪಾಯಿ. ಟಾಪ್ ಮಾಡೆಲ್‌ಗೆ 1.75 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 – ಈ ಪವರ್‌ಫುಲ್ ಬೈಕ್‌ನ ಇಂಧನ ಸಾಮರ್ಥ್ಯ 13 ಲೀಟರ್. ಈ ಬೈಕ್ 6100 rpm ನಲ್ಲಿ 20.2 bhp ಪವರ್ ಮತ್ತು 4000 rpm ನಲ್ಲಿ 27 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನ ಬೆಲೆ 2,24,755 ರೂ.ನಿಂದ ಆರಂಭವಾಗುತ್ತದೆ.
ಹಾರ್ಲೆ ಡೇವಿಡ್ಸನ್ X440 – ಇದು ಕೂಡ ಶಕ್ತಿಶಾಲಿ ಮೋಟಾರ್‌ಸೈಕಲ್‌ಗಳಲ್ಲೊಂದು. ಲೀಟರ್‌ಗೆ 35 ಕಿಮೀ ಓಡಬಲ್ಲ ಸಾಮರ್ಥ್ಯ ಹೊಂದಿದೆ. ಈ ಬೈಕ್ 6000 rpm ನಲ್ಲಿ 27 bhp ಪವರ್ ಮತ್ತು 4000 rpm ನಲ್ಲಿ 38 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಬೆಲೆ 2,39,500 ರೂ.ನಿಂದ ಪ್ರಾರಂಭವಾಗುತ್ತದೆ.
ಬಜಾಜ್ ಡೊಮಿನಾರ್ 400 – ಸುರಕ್ಷತೆಗಾಗಿ ಬಜಾಜ್ ಡೊಮಿನಾರ್ 400 ಬೈಕ್‌ನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್, ಸಂಪೂರ್ಣ ಎಲ್ಇಡಿ ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 2.3 ಲಕ್ಷ ರೂಪಾಯಿ.
ಟಿವಿಎಸ್ ರೈಡರ್ – ಟಿವಿಎಸ್ ರೈಡರ್ 5.9 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 60 ಕಿಮೀಗೆ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್ನಲ್ಲಿ ರಿವರ್ಸ್ ಎಲ್ ಸಿಡಿ ಡಿಜಿಟಲ್ ಕ್ಲಸ್ಟರ್ ಅಳವಡಿಸಲಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 95,219 ರೂಪಾಯಿಯಿಂದ 1.03 ಲಕ್ಷ ರೂಪಾಯಿವರೆಗಿದೆ.