ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ 2017 ಡಿಸೆಂಬರ್ 21ರಂದು ರಾಜ್ಯದ್ಯಂತ ತೆರೆಕಂಡಿತ್ತು. ಆಕ್ಷನ್ ಫ್ಯಾಮಿಲಿ ಎಂಟರ್ಟೈನರ್ ಕಥಾ ಹಂದರ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆದಿತ್ತು.
ಇದೀಗ ಅಂಜನಿಪುತ್ರ ಮೇ 10ಕ್ಕೆ ಮರು ಬಿಡುಗಡೆಯಾಗಲಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಪುನೀತ್ ರಾಜಕುಮಾರ್ ಅವರನ್ನು ಮತ್ತೊಮ್ಮೆ ತೆರೆಯ ಮೇಲೆ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಎ ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಗೆ ಜೋಡಿ ಆಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ರಮ್ಯಕೃಷ್ಣ ಸೇರಿದಂತೆ ರವಿಶಂಕರ್, ಮುಖೇಶ್ ತಿವಾರಿ, ಸಾಧು ಕೋಕಿಲ, ಚಿಕ್ಕಣ್ಣ, ಹರಿಣಿ, ಕಾಕ್ರೋಚ್ ಸುದೀ, ಸೀತಾ ಕೋಟೆ ತೆರೆ ಹಂಚಿಕೊಂಡಿದ್ದಾರೆ. ಎಂ ಎನ್ ಕುಮಾರ್ ನಿರ್ಮಾಣ ಮಾಡಿದ್ದು, ದೀಪು ಎಸ್ ಕುಮಾರ್ ಸಂಕಲನವಿದೆ.